ಯುರೋಪಿನಾದ್ಯಂತ ಹಬ್ಬಿರುವ `ತಹರ್ರುಶ್’ ಎಂಬ ಅರಬರ ಪೈಶಾಚಿಕ ರೇಪ್ ಗೇಮ್

ಬರ್ಲಿನ್ : ಅರಬ್ ಪುರುಷರ ಗುಂಪುಗಳು ಮಹಿಳೆಯರ ಮೇಲೆ ನಡೆಸಿದ ಲೈಂಗಿಕ ಹಲ್ಲೆ ಘಟನೆಗಳು ಮೊದಮೊದಲು  ಜರ್ಮನಿಯ ಕೊಲೊನ್ ನಗರದಿಂದ ಹೊಸ ವರ್ಷದ ಮುನ್ನಾ ದಿನ  ವರದಿಯಾದಾಗ ಆ ಸುದ್ದಿಗಳನ್ನು ಮುಚ್ಚಿ ಹಾಕಲು ಯತ್ನಿಸಲಾಗಿತ್ತು. ಆದರೆ ಇತ್ತೀಚೆಗೆ ಅಧಿಕಾರಿಗಳು ಎಚ್ಚರಗೊಂಡಿದ್ದು,  ಶಂಕಿತ ಅರಬ್ ರೇಪ್ ಆಟ – ತಹರ್ರುಶ್ – ಇದೀಗ ಯುರೋಪ್  ಪ್ರವೇಶಿಸಿದೆ ಎಂದು ಜರ್ಮನ್ ಫೆಡರಲ್ ಕ್ರಿಮಿನಲ್ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಹೌದು. ಇದೊಂದು ಅಸಹನೀಯ ಗೇಮ್ ಆಗಿದ್ದು ಯುರೋಪ್ ರಾಷ್ಟ್ರಗಳಲ್ಲಿ ಆಶ್ರಯ ಪಡೆದಿರುವ ದೊಡ್ಡ ಸಂಖ್ಯೆಯ ನಿರಾಶ್ರಿತರಿಂದ ಇದು ಇಲ್ಲಿಗೆ ಪ್ರವೇಶಿಸಿದೆ.

ಇಂತಹುದೇ ಘಟನೆಗಳು ಬರ್ಲಿನ್, ಹ್ಯಾಂಬರ್ಗ್, ಬೀಲೆಫೀಲ್ಡ್, ಫ್ರಾಂಕ್ಫರ್ಟ್, ಡಸ್ಸೆಲ್ಡೊರ್ಫ್ ಹಾಗೂ ಸ್ಟಟ್ಗರ್ಟ್ ನಗರಗಳಲ್ಲೂ ನಡೆದಿವೆ. ಆದರೆ ಜರ್ಮನಿಯೊಂದೇ ಇದರಿಂದ ಕಂಗೆಟ್ಟಿರುವ ರಾಷ್ಟ್ರವಲ್ಲ, ಇತರ ಯುರೋಪಿಯನ್ ರಾಷ್ಟ್ರಗಳಾದ ಆಸ್ಟ್ರಿಯಾ ಮತ್ತು ಸ್ವಿಝರ್ಲೆಂಡಿನಿಂದಲೂ  ಇಂತಹ ಘಟನೆಗಳು ವರದಿಯಾಗಿವೆ. ಈ ದಾಳಿಗಳಲ್ಲಿ ಸಂತ್ರಸ್ತರಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಸೆಳೆಯುವುದರಿಂದ ಹಿಡಿದು ಅವರಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಕೂಡ ನಡೆಸಲಾಗುತ್ತದೆ. ಈ ವಿಧದ ಹಿಂಸೆಗೊಳಗಾಗಿರುವ ಹಲವಾರು ಮಹಿಳೆಯರು ತಾವು ಅನುಭವಿಸಿದ ನರಕಯಾತನೆಯನ್ನು ವಿವರಿಸುತ್ತಾರೆ.

ದೊಡ್ಡ ಸಂಖ್ಯೆಯ ಅರಬ್ ಪುರುಷರು ಮಹಿಳೆಯೊಬ್ಬಳನ್ನು ಸುತ್ತುವರಿದು ನಂತರ ಆಕೆಗೆ ಲೈಂಗಿಕ ಕಿರುಕುಳ ನೀಡುವುದನ್ನು ತಹರ್ರುಶ್ ಎನ್ನಲಾಗುತ್ತದೆ. ಪುರುಷರು ವೃತ್ತಾಕಾರದಲ್ಲಿ ಮಹಿಳೆಯರನ್ನು ಸುತ್ತುವರಿಯುತ್ತಾರೆ. ನಂತರ ಆ ಗುಂಪಿನಲ್ಲಿ ಸಾಕಷ್ಟು ಮಂದಿ ಪುರುಷರಿದ್ದರೆ ಅವರು ಸಂತ್ರಸ್ತೆಯನ್ನು ದರದರನೆ ಎಳೆದುಕೊಂಡು ಹೋಗುತ್ತಾರೆ, ಅವರ ಬಟ್ಟೆಗಳನ್ನು ಹರಿದು ಹಾಕಿ ಅವರ ಮೇಲೆ  ದೈಹಿಕ ಹಲ್ಲೆ ನಡೆಸುತ್ತಾರೆ.

ಈ ಗುಂಪಿನಲ್ಲಿ  ಒಳಗಿನ ವೃತ್ತದಲ್ಲಿ ಅಂದರೆ ಸಂತ್ರಸ್ತೆಗೆ ಹತ್ತಿರದಲ್ಲಿರುವ ವೃತ್ತದಲ್ಲಿರುವ ಪುರುಷರು ಆಕೆಯ ಮೇಲೆ ಹಲ್ಲೆ ನಡೆಸಿದರೆ, ಮಧ್ಯ ಭಾಗದ ವೃತ್ತದಲ್ಲಿ ನಿಂತಿರುವ ಪುರುಷರು ಅದರ ಮಜಾ ನೋಡುತ್ತಾರೆ. ಹೊರಗಿನ ವೃತ್ತಾಕಾರದಲ್ಲಿರುವವರು ಇತರರ  ಗಮನವನ್ನು ಇದರಿಂದ ಬೇರೆಡೆ ಸೆಳೆಯರು ಯತ್ನಿಸುತ್ತಾರೆ. ಇನ್ನು ಕೆಲವರು ಈ ವೃತ್ತದಲ್ಲಿಯೇ ನಿಂತುಕೊಂಡು ಸಂತ್ರಸ್ತೆಯನ್ನು ರಕ್ಷಿಸುವವರಂತೆ ನಟಿಸುತ್ತಾರೆ.

ಇತ್ತೀಚೆಗೆ ನಡೆದ ಇಂತಹ ಒಂದು ಘಟನೆಯ ವೀಡಿಯೋ ಕೂಡ ಹರಿದಾಡುತ್ತಿದ್ದು ಮಹಿಳೆಯರು ಸಹಾಯಕ್ಕಾಗಿ ಅರಚುವುದನ್ನು ಇದರಲ್ಲಿ ಕೇಳಬಹುದು.

ಈ ತಹರ್ರುಶ್ ಎಂಬ ಪೈಶಾಚಿಕ ಆಟ ಹೆಚ್ಚಾಗಿ ಈಜಿಪ್ಟಿನಲ್ಲಿ ಸಾಮಾನ್ಯವಾಗಿದ್ದರೆ ಇತರ ಅರಬ್ ದೇಶಗಳಲ್ಲೂ ಅದು ಚಾಲ್ತ್ತಿಯಲ್ಲಿದ್ದು ಎಲ್ಲಾ ಧರ್ಮದ ಮಹಿಳೆಯರೂ ಈ ವಿಚಿತ್ರ ಕಿರುಕುಳದಿಂದ ತೊಂದರೆ ಅನುಭವಿಸಿದ್ದಾರೆ.  ಈ ತಹರ್ರುಶ್ ಎಂಬ  ಕ್ರೂರ ಆಟವು 2012ರಲ್ಲಿ ಮೊದಲು ಬೆಳಕಿಗೆ ಬಂದಿತ್ತು. ಕೈರೋದ ತಹ್ರೀರ್ ಚೌಕ ಪ್ರದೇಶದಲ್ಲಿ ಈಜಿಪ್ಟ್ ಅಧ್ಯಕ್ಷರ ವಿರುದ್ಧ ಪ್ರತಿಭಟಿಸುತ್ತಿದ್ದ ಪುರುಷರ ಗುಂಪುಗಳು  ಸ್ಥಳೀಯ ಮಹಿಳೆಯರು ಮತ್ತು ವಿದೇಶಿ ಪತ್ರಕರ್ತರ ಮೇಲೆ ಆಗ ಹಲ್ಲೆ ನಡೆಸಿದ್ದವು.