ಭ್ರಷ್ಟಾಚಾರ ಎನ್ನುವ ಕರಿಬೆಕ್ಕು

ದೇಶದಲ್ಲಿ ನೋಟು ರದ್ಧತಿಯಿಂದ ಜನರಿಗೆ ತೊಂದರೆ ಆಗಿದ್ದು ನಿಜ. ತೊಂದರೆಯನ್ನು ಅನುಭವಿಸಿ ನೋವು ನುಂಗಿ ಪರದಾಡಿದ್ದು ನಿಜ. ಶ್ರೀ ಸಾಮಾನ್ಯನಿಂದ ಮೊದಲ್ಗೊಂಡು ಶ್ರೀಮಂತರು  ರಾಜಕಾರಣಿಗಳು ಗೊಣಗಿದ್ದೇ ಗೊಣಗಿದ್ದು  ಭ್ರಷ್ಟಾಚಾರ ಎನ್ನುವ ಕರಿಬೆಕ್ಕು ವ್ಯವಸ್ಥೆಯ ಎದುರು ನುಸುಳಿ ತನ್ನ ಕೈಚಳಕ ತೋರಿಸಿ ತನ್ನಲ್ಲಿದ್ದ ನೋಟುಗಳನ್ನು ಕೋಟಿಗಟ್ಟಲೆ ಬದಲಾಯಿಸಿಕೊಂಡಿತು. ಈಗಲೂ ಆ ದಂಧೆಗೆ ಕಡಿವಾಣ ಬಿದ್ದಿಲ್ಲ ಎನ್ನುವುದಾದರೆ ಈ ದೇಶದಲ್ಲಿ ಭ್ರಷ್ಟಾಚಾರವೇ ಒಂದು ವ್ಯವಸ್ಥೆ ಎಂದು ನಂಬಿ ಅದಕ್ಕೆ ಜನ ಒಗ್ಗುವ ದಿನ ದೂರವಿಲ್ಲ

  • ಕೀರ್ತನ್ ಶೆಟ್ಟಿ  ಕಿನ್ನಿಮುಲ್ಕಿ  ಉಡುಪಿ