ಶಿರ್ತಾಡಿಯಲ್ಲಿ 15 ಅಡಿ ಎತ್ತರದ ಕ್ರಿಸ್ಮಸ್ ನಕ್ಷತ್ರ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಶಿರ್ತಾಡಿಯ ಲೈಫ್ ಸರ್ವೀಸ್ ಸ್ಟೇಶನ್ ಮಾಲಕರಾದ ಜೋಯೆಲ್ ಸಿಕ್ವೇರಾರವರು ಕ್ರಿಸ್ಮಸ್ ಪ್ರಯುಕ್ತ 15 ಅಡಿ ಎತ್ತರದ ಬೃಹತ್ ನಕ್ಷತ್ರವನ್ನು ನಿರ್ಮಿಸಿದ್ದಾರೆ. ರಾಗಿ ಹಾಗೂ ಬೈಹುಲ್ಲಿನಿಂದ ನಿರ್ಮಿಸಲಾದ ಈ ನಕ್ಷತ್ರದ ಅಗಲ 10 ಅಡಿ ಇದೆ. ಕಳೆದ ಮೂರು ವರ್ಷಗಳಿಂದಲೂ ಶಿರ್ತಾಡಿ ಪರಿಸರದಲ್ಲಿ ಜೋಯೆಲ್ ನಿರ್ಮಿಸುವ ವಿಶಿಷ್ಟ ನಕ್ಷತ್ರ ಜನರ ಗಮನ ಸೆಳೆದಿದ್ದು ಮಾತ್ರವಲ್ಲದೇ ತಾಲೂಕು ಹಾಗೂ ಚರ್ಚ್ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದಿತ್ತು. ಯತೀಶ್ ಕುಲಾಲ್ ಕಾಶಿಪಟ್ಣ ಹಾಗೂ ಗಣೇಶ್ ಶಿರ್ತಾಡಿ ಈ ನಕ್ಷತ್ರ ನಿರ್ಮಾಣದಲ್ಲಿ ಸಹಕರಿಸಿದ್ದಾರೆ.

ಸ ಒಕೆ