ಕುದ್ದುಪದವು ಅಪಘಾತ ವಲಯದ ರಸ್ತೆ ತಿರುವನ್ನು ಅಗಲಗೊಳಿಸಿದ ಅಡ್ಯನಡ್ಕ ಕುಂಞ್ಞ ಫ್ರೆಂಡ್ಸ್ ತಂಡ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಹಲವಾರು ವಾಹನ ಸವಾರರ ರಕ್ತ ಹರಿದಿದ್ದ ಕುದ್ದುಪದವು ಅಪಘಾತ ವಲಯದ ರಸ್ತೆ ತಿರುವನ್ನು ಅಡ್ಯನಡ್ಕ ಕುಂಞ್ಞ ಫ್ರೆಂಡ್ಸ್ ತಂಡ ಸ್ವಂತ ಖರ್ಚಿನಲ್ಲಿ ಅಗಲಗೊಳಿಸುವ ಮೂಲಕ ಅಧಿಕಾರಿಗಳಿಗೆ ಸಡ್ಡು ಹೊಡೆದಿದೆ.

ವಿಟ್ಲ-ಕಾಸರಗೋಡು ರಸ್ತೆಯ ಕುದ್ದುಪದವು ಎಂಬಲ್ಲಿನ ಕಿರಿದಾದ ರಸ್ತೆ ತಿರುವಿನಲ್ಲಿ ಪದೇ ಪದೇ ಅಪಘಾತಗಳು ಸಂಭವಿಸಿ ಹಲವು ವಾಹನ ಸವಾರರ ರಕ್ತ ಹರಿದಿತ್ತು. ಅಲ್ಲದೇ ಇದೇ ರಸ್ತೆ ತಿರುವಿನಲ್ಲಿ ನಡೆದ ಅಪಘಾತದಿಂದಾಗಿ ಈವರೆಗೆ ಐದು ಜನ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಅದೆಷ್ಟೋ ಬಾರಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ರಸ್ತೆ ತಿರುವನ್ನು ಅಗಲಗೊಳಿಸುವಂತೆ ಸ್ಥಳೀಯರು ಮನವಿ ಮಾಡಿದ್ದರೂ ಈವರೆಗೂ ಪ್ರಯೋಜನ ಕಂಡಿಲ್ಲ. ಸರಕಾರದ ಮತ್ತು ಜನಪ್ರತಿನಿಧಿಗಳ ಮೀನಮೇಷ ಸಂಸ್ಕøತಿಯಿಂದ ರೋಸಿ ಹೋಗಿದ್ದ ಅಡ್ಯನಡ್ಕದ ಕುಂಞ್ಞ ಫ್ರೆಂಡ್ಸ್ ತಂಡ ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ ಯಂತ್ರದ ಮೂಲಕ ರಸ್ತೆ ತಿರುವನ್ನು ಅಗಲಗೊಳಿಸಿದೆ. ಯುವಕರ ಸಮಾಜಸೇವೆ ಸಾರ್ವಜನಿಕರ ಮತ್ತು ವಾಹನ ಸವಾರರ ಶ್ಲಾಘನೆಗೆ ಪಾತ್ರವಾಗಿದೆ.