ಮರಳು ಅಕ್ರಮ ಸಾಗಾಟಕ್ಕೆ ಸಿದ್ಧವಾಗಿದ್ದ 9 ಲಾರಿ ವಶ

ಸಾಂದರ್ಭಿಕ ಚಿತ್ರ

ಕರ್ನಾಟಕ -ಕೇರಳ ಗಡಿಯಲ್ಲಿ ಕಾರ್ಯಾಚರಣೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕೇರಳ, ಕರ್ನಾಟಕದ ಗಡಿಭಾಗವಾಗಿರುವ ತಲಪಾಡಿ ತಚ್ಚಾಣಿ ಮೂಲಕ ಅಕ್ರಮವಾಗಿ ಕಾಸರಗೋಡಿನ ಕಡೆಗೆ ಮರಳು ಸಾಗಾಟ ಮಾಡುವುದಕ್ಕೆ ಗುಪ್ತ ಸ್ಥಳದಲ್ಲಿ ನಿಲ್ಲಿಸಲಾಗಿದ್ದ 9 ಬೃಹತ್ ಮರಳು ಲಾರಿಗಳನ್ನು ಉಳ್ಳಾಲ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಪಾವೂರು, ಕಲ್ಲಾಪು ಕಡೆಯಿಂದ ತಂದು ತಚ್ಚಣಿ ಎಂಬಲ್ಲಿ ದಾಸ್ತಾನಿರಿಸಲಾದ ಮರಳನ್ನು 10, 12 ಚಕ್ರಗಳ ಬೃಹತ್ ಲಾರಿಯಲ್ಲಿ ತುಂಬಿಸಿಟ್ಟು, ಬುಧವಾರದಂದು ಕೇರಳ ಕಡೆಗೆ ಸಾಗಾಟ ನಡೆಸಲು ಯತ್ನಿಸುತ್ತಿದ್ದರು. ಅಕ್ರಮ ಮರಳುಸಾಗಾಟ ಮಾಡಲು ಭಾರೀ ಲಾರಿಗಳನ್ನು ಇಟ್ಟು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಉಳ್ಳಾಲ ಪೊಲೀಸರು ದಾಳಿ ನಡೆಸಿ ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ದಾಳಿ ನಡೆಸುತ್ತಿರುವ ಮಾಹಿತಿ ಸಿಗುತ್ತಿದ್ದಂತೆ ಲಾರಿ ಚಾಲಕರು, ಕ್ಲೀನರುಗಳು ಪರಾರಿಯಾಗಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.