ಎನ್ಎಂಪಿಟಿ ಬಂದರಿಗೆ ಬಂದ ಹಡಗಿನ ಕಂಟೈನರ್ನಲ್ಲಿ 9 ಕೇಜಿ ಗಾಂಜಾ ಪತ್ತೆ

ಸಾಂದರ್ಭಿಕ ಚಿತ್ರ

ಮಂಗಳೂರು : ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ನವಮಂಗಳೂರು ಬಂದರಿಗೆ ಆಗಮಿಸಿದ ಹಡಗಿನ ಖಾಲಿ ಕಂಟೈನರದಲ್ಲಿ ಸುಮಾರು 9 ಕೇಜಿ ಗಾಂಜಾವನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ.

ಕೊಲಂಬೋದಿಂದ ಆಗಮಿಸಿದ ಹಡಗಿಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಹಡಗಿನ ಕಂಟೈನರ್ ಎಸಿ ಪಕ್ಕ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರ್‍ಗಳಲ್ಲಿ ಗಾಂಜಾವನ್ನು ದಾಸ್ತಾನಿಟ್ಟಿರುವುದನ್ನು ಪತ್ತೆ ಹಚ್ಚಿದ್ದಾರೆ.

ಬಂದರಿನಲ್ಲಿ ಇದೇ ಮೊದಲ ಬಾರಿಗೆ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದಿರುವ ಅಧಿಕಾರಿಗಳು ಈ ಘಟನೆ ಹಿಂದೆ ಇರುವ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಹೇಳಿದ್ದಾರೆ.