ರಿಕ್ಷಾ ಮುಖಾಮುಖಿ ಡಿಕ್ಕಿ : 9 ಪ್ರಯಾಣಿಕರು ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ಪಟ್ಟಣದ ಕಲಭಾಗದಲ್ಲಿ ಗುರುವಾರ ಸಂಜೆ ಪ್ರಯಾಣಿಕರ ರಿಕ್ಷಾ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಅದರಲ್ಲಿದ್ದ 9 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಒಂದು ರಿಕ್ಷಾ ಬೇಲೆಕೇರಿಗೆ ಹೊರಟರೆ ಇನ್ನೊಂದು ಬೇಲೆಕೇರಿಯಿಂದ ಅಂಕೋಲಾ ಕಡೆಗೆ ಬರುತ್ತಿತ್ತು. ಆದರೆ ಪರಸ್ಪರ ಡಿಕ್ಕಿ ಹೊಡೆದಿದ್ದರಿಂದಾಗಿ ಎರಡೂ ರಿಕ್ಷಾದಲ್ಲಿದ್ದವರಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರವಾರ ಮೂಡಗೇರಿಯ ಸಾಚಿ ಸುನಿಲ ನಾಯ್ಕ, ತಾಲೂಕಿನ ಕೇಣಿಯ ದಿವ್ಯಾ ಅಶೋಕ ನಾಯ್ಕ, ಪ್ರಭಾಕರ ಕಲ್ಮನೆ, ಬೇಲೆಕೇರಿಯ ಮಂಜುನಾಥ ಬುದ್ದವಂತ ಬಾನಾವಳಿಕರ್, ನಾಗಪ್ಪ ಭೀಮಾ ಬಾನಾವಳಿಕರ್, ಜಮಗೋಡದ ಮಂಗಲ ರಾಜೀವ ನಾಯಕ, ಶೆಟಗೇರಿ ಹೊಸ್ಕೇರಿಯ ಸುಶೀಲಾ ಬೀರಣ್ಣ ನಾಯಕ, ರಿಕ್ಷಾ ಚಾಲಕರಾದ ನಾಗನಂದ ಬಂಟ ಕೇಣಿ, ನಿತ್ಯಾನಂದ ಆರ್ ನಾಯ್ಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂಕೋಲಾ ಕಡೆಯಿಂದ ತೆರಳುತ್ತಿದ್ದ ರಿಕ್ಷಾ ಚಾಲಕ ಮೊಬೈಲಿನಲ್ಲಿ ಮಾತನಾಡುತ್ತ ಚಾಲನೆ ಮಾಡುತ್ತಿರುವುದು ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.