82 ಬಾಟ್ಲಿ ಮದ್ಯ ವಶಕ್ಕೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಅಬಕಾರಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಮಾರಾಟಕ್ಕೆ ಸಂಗ್ರಹಿಸಿಟ್ಟ 82 ಬಾಟ್ಲಿ ಮದ್ಯವನ್ನು ವಶಪಡಿಸಲಾಗಿದೆ.
ಕಾಸರಗೋಡು, ಅಡ್ಕತ್ತಬೈಲ್, ಕೇಳುಗುಡ್ಡೆ, ತಾಳಿಪಡ್ಪು ಮೊದಲಾದೆಡೆಗಳಲ್ಲಿ ಅಬಕಾರಿ ದಳ ಕಾರ್ಯಾಚರಣೆ ನಡೆಸಿತ್ತು. ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟ 750 ಮಿಲಿಯ 82 ಬಾಟ್ಲಿ ಮದ್ಯವನ್ನು ವಶಪಡಿಸಲಾಗಿದೆ. ಇವುಗಳನ್ನು ಸ್ಪಿರಿಟ್, ಕಲರ್, ಎಸೆನ್ಸ್ ಮಿಶ್ರ ಮಾಡಿ ತಯಾರಿಸಲಾಗಿದೆ ಎಂದು ಅಬಕಾರಿ ದಳ ತಿಳಿಸಿದೆ.