80ರ ವೃದ್ಧೆ ಖಾಸಗಿ ಭಾಗದಲ್ಲಿ ಬಾಟಲಿ ತುರುಕಿಸಿ ಕೊಂದರು

ಚಂಡೀಗಢ : ಸೋನೆಪತ್ ಜಿಲ್ಲೆಯ ಭಟ್ಗಾಂವ್ ಗ್ರಾಮದಲ್ಲಿ 80 ವರ್ಷದ ವೃದ್ಧೆಯೊಬ್ಬರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು ಆಕೆಯ ಖಾಸಗಿ ಭಾಗಗಳಲ್ಲಿ ಟಾಯ್ಲೆಟ್ ಕ್ಲೀನರ್ ಬಾಟಲಿಯೊಂದನ್ನು ತುರುಕಿಸಿರುವುದು ಕಂಡುಬಂದಿದೆ. ಇದೊಂದು ಕೊಲೆ ಪ್ರಕರಣವಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

ಮನೆಯ ಮೊದಲ ಅಂತಸ್ತಿನಲ್ಲಿ ವಾಸವಾಗಿರುವ ಆಕೆಯ ಪುತ್ರ ಜೈ ಭಗವಾನ್ ತಳ ಅಂತಸ್ತಿಗೆ ಬಂದು ನೋಡಿದಾಗಲೇ ತಾಯಿ ಮೃತಪಟ್ಟಿರುವುದು ಆತನ ಗಮನಕ್ಕೆ ಬಂದಿತ್ತು. ಅತಿಯಾದ ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.