8 ಜುಗಾರಿಕೋರರ ಸೆರೆ

 ನಮ್ಮ ಪ್ರತಿನಿಧಿ ವರದಿ

ಉಡುಪಿ : ನಗರದ ಹೊರವಲಯದ ಕೊಡವೂರು ಬೃಂದಾವನ ಹೋಟೆಲ್ ಹಿಂಬದಿ ಇಸ್ಪೀಟ್ ಆಡುತ್ತಿದ್ದ 8 ಮಂದಿ ಜುಗಾರಿಕೋರರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ. ಜಗದೀಶ್ ಕುಂದರ್ (46), ದಾಮೋದರ್ ಬಂಗೇರಾ (38), ಜಮೀರ್ (34), ಶರೀಫ್ (36), ಅಭೀದ್ (32), ಯಶವಂತ (29), ಚೇತನ್ (19) ಹಾಗೂ ರಾಮ ಅಮೀನ್ (46) ಬಂಧಿತ ಜುಗಾರಿಕೋರರು. ಬಂಧಿತರಿಂದ 20,230 ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.