8 ಮಂದಿ ಆಸ್ಪತ್ರೆಗೆ, ಮೂವರು ಗಂಭೀರ

ಸಿಪಿಎಂ-ಬಿಜೆಪಿ ಘರ್ಷಣೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಚೆರ್ಕಳ ಸಮೀಪದ ಪಾಡಿ ಹಾಗೂ ಕೊಯಿಪ್ಪಾಡಿ ಎಂಬಲ್ಲಿ ಸಿಪಿಎಂ ಮತ್ತು ಬಿಜೆಪಿ ಮಧ್ಯೆ ಉಂಟಾದ ಘರ್ಷಣೆಯಲ್ಲಿ ಎಂಟು ಮಂದಿ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.

ತಲೆಗೆ ಹಾಗೂ ದೇಹದ ಇತರ ಭಾಗಕ್ಕೆ ಗಂಭೀರ ಗಾಯಗೊಂಡ ಸಿಪಿಎಂ ಕಾರ್ಯಕರ್ತರಾದ ಜಿಶಾಲ್ (18), ನಿಶ್ವಲ್ (20), ಸುರೇಶ್ ಬಾಬು (43), ಸಜಿತ್ (25), ರಾಹುಲ್ ರಾಜ್ (18) ಹಾಗೂ ಶ್ರೀಜಿತ್ (20) ಎಂಬವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಹೊಟ್ಟೆ ಹಾಗೂ ಬೆನ್ನೆಲುಬುಗಳಿಗೆ ಗಂಭೀರ ಗಾಯಗೊಂಡ ಬಿಜೆಪಿ ಕಾರ್ಯಕರ್ತರಾದ ಕೊಯಿಪ್ಪಾಡಿ ನಿವಾಸಿ ಪ್ರವೀಣಕುಮಾರ್ (23) ಹಾಗೂ ಇವರ ಸಹೋದರ ಗೋಪಾಲಕೃಷ್ಣ ಕೂಡಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾಡಿ ಕ್ಷೇತ್ರದ ಮಹೋತ್ಸವಕ್ಕೆಂದು ತೆರಳಿದ ಬಿಜೆಪಿ ಕಾರ್ಯಕರ್ತ ಶಿವಶಂಕರನ ಕೈಯಲ್ಲಿದ್ದ ರಾಖಿಯನ್ನು ಸಿಪಿಎಂ ಕಾರ್ಯಕರ್ತರು ತುಂಡರಿಸಿ ಹಲ್ಲೆಗೈದಿರುವುದಾಗಿ ಬಿಜೆಪಿ ಕಾರ್ಯಕರ್ತರು ದೂರಿದ್ದಾರೆ.

ಬಿಜೆಪಿ ಕಾರ್ಯಕರ್ತರು ನಮಗೆ ಹಲ್ಲೆ ಮಾಡಿರುವುದಾಗಿ ಸಿಪಿಎಂ ಕಾರ್ಯಕರ್ತರು ಆರೋಪಿಸಿದ್ದಾರೆ. ಎರಡೂ ಕಡೆಯಿಂದ ದೂರು ಸ್ವೀಕರಿಸಿದ ಪೆÇಲೀಸರು ಕೇಸು ದಾಖಲಿಸಿ ತನಿಖೆಗೆ ಚಾಲನೆ ನೀಡಿದ್ದಾರೆ.