ಉಲಾಯಿ ಪಿದಾಯಿ : 8 ಮಂದಿ ಬಂಧನ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ನಗರದ ಬನ್ನೂರು ಸಪ್ತಗಿರಿ ಲೇಔಟ್ ಬಳಿ ಉಲಾಯಿ ಪಿದಾಯಿ ಆಟದಲ್ಲಿ ನಿರತರಾಗಿದ್ದ 8 ಮಂದಿ ಆರೋಪಿಗಳನ್ನು ನಗರ ಪೆÇಲೀಸರು ಬಂಧಿಸಿದ್ದಾರೆ.

ಹಣ ಬೆಟ್ ಕಟ್ಟಿ ಆಟದಲ್ಲಿ ನಿರತರಾಗಿದ್ದ ಜೋಸೆಫ್ ಡಿಸೋಜಾ ಕೊಡಿಪ್ಪಾಡಿ, ಮಂತು ಪಾಸ್ವಾನ್ ಪಡ್ನೂರು, ಸುಂದರ ಕಬಕ,ಸಂತೋಷ್ ಚಿಕ್ಕಮುಡ್ನೂರು, ಹೇಮಚಂದ್ರ ಕಬಕ, ಹರೀಶ ಕಬಕ, ಪ್ರಕಾಶ್ ಕಬಕ, ರಾಮಣ್ಣ ಬಲ್ನಾಡು ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ 3215 ನಗದನ್ನು ವಶಪಡಿಸಿಕೊಳ್ಳಲಾಗಿದೆ.