7 ಪಾಕ್ ಸಂಸ್ಥೆಗಳಿಗೆ ಅಮೆರಿಕಾ ನಿರ್ಬಂಧ

ವಾಷಿಂಗ್ಟನ್ : ಅಮೆರಿಕಾದ ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯಾಚರಿಸಿವೆ ಎಂಬ ನೆಪವೊಡ್ಡಿ ಪಾಕಿಸ್ತಾನದ ಕ್ಷಿಪಣಿ ಯೋಜನೆಯ ಭಾಗವಾಗಿರುವ ಏಳು ಸಂಸ್ಥೆಗಳಿಗೆ ಅಮೆರಿಕಾ ನಿರ್ಬಂಧ ಹೇರಿದೆ. ಈ ಬೆಳವಣಿಗೆ ಎರಡೂ ದೇಶಗಳ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಇಸ್ಲಾಮಾಬಾದ್ ಮೂಲದ ನ್ಯಾಷನಲ್ ಇಂಜಿನಿಯಿಂಗ್ ಎಂಡ್ ಸೈಂಟಿಫಿಕ್ ಕಮಿಷನ್ ಹಾಗೂ ಅದರ ಮೂರು ಅಂಗಸಂಸ್ಥೆಗಳಾದ ಏರ್ ವೆಪನ್ಸ್ ಕಾಂಪ್ಲೆಕ್ಸ್, ಮೆರಿಟೈಮ್ ಟೆಕ್ನಾಲಜಿ ಕಾಂಪ್ಲೆಕ್ಸ್ ಹಾಗೂ ನ್ಯೂ ಆಟೋ ಇಂಜಿನಿಯರಿಂಗ್ ಸಂಸ್ಥೆಗಳು ನಿರ್ಬಂಧ ವಿಧಿಸಲ್ಪಟ್ಟ ಸಂಸ್ಥೆಗಳಾಗಿವೆ.

“ಅಮೆರಿಕಾದ ರಾಷ್ಟ್ರೀಯ ಭದ್ರತೆ ಹಾಗೂ  ಅಥವಾ ಅದರ ವಿದೇಶಾಂಗ ನೀತಿಗಳಿಗೆ ವಿರುದ್ಧವಾಗಿ ಈ ಸಂಸ್ಥೆಗಳು ಕಾರ್ಯಾಚರಿಸುತ್ತಿವೆಯೆಂಬುದಾಗಿ ನಂಬಲು ಸಾಕಷ್ಟು  ಕಾರಣಗಳಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಅಮೆರಿಕಾದ ವಾಣಿಜ್ಯ ಇಲಾಖೆ ಹೇಳಿಕೆ ಹೇಳಿದೆ.

ಆದರೆ ಈ ಬಗ್ಗೆ ಪಾಕಿಸ್ತಾನ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.