ಎನ್ಕೌಂಟರಿನಲ್ಲಿ 7 ನಕ್ಸಲರು ಬಲಿ

ಹೈದರಾಬಾದ್ : ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಿನ್ನೆ ನಡೆದ ಗುಂಡಿನ ಚಕಮಕಿಯಲ್ಲಿ ಶಂಕಿತ ಮಾವೋ ಗುಂಪಿನ ಐವರು ಮಹಿಳೆಯರು ಮತ್ತು ಇಬ್ಬರು ಪುರುಷರು ಬಲಿಯಾಗಿದ್ದಾರೆ. ಘಟನಾ ಸ್ಥಳದಿಂದ ಪೊಲೀಸರು ಎರಡು ಸ್ವಯಂ-ಲೋಡಿಂಗ್ ರೈಫಲ್ಸ್, ಎರಡು ಪಾಯಿಂಟ್ 303 ರೈಫಲ್ಸ್ ಮತ್ತು ಮಹತ್ವದ ಸೊತ್ತು ತುಂಬಿದ್ದ ಕೆಲವು ಚೀಲ ವಶಪಡಿಸಿಕೊಂಡಿದ್ದಾರೆ. ಝಿಂಗನೂರು ಅರಣ್ಯ ಪ್ರದೇಶದಲ್ಲಿ ಸಿ-60 ಕಮಾಂಡೋ ಕೂಂಬಿಂಗ್ ಅಪರೇಶನ್ ವೇಳೆ ಈ ಎನ್‍ಕೌಂಟರ್ ನಡೆದಿದೆ ಎಂದು ಗಡ್ಚಿರೋಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.