ಏಳು ಮಂದಿ ಬಾಲಕರಿಂದ 11ರ ಬಾಲಕಿ ಅತ್ಯಾಚಾರ

ಸಾಂದರ್ಭಿಕ ಚಿತ್ರ

ಶಿಲ್ಲೊಂಗ್ : ನೈರುತ್ಯತ ಖಾಸಿ ಹಿಲ್ಸ್ ಜಿಲ್ಲೆಯ ಮೌಟೆನ್ ಗ್ರಾಮದಲ್ಲಿ ಏಳು ಮಂದಿ ಬಾಲಕರು 11 ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ.

ಮೊದಲಿಗೆ ಡಿಸೆಂಬರಿನಲ್ಲಿ ಈ ಬಾಲಕಿ ಭತ್ತದ ಗೆದ್ದೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಳು. ಜನವರಿ 13ರಂದು ಮನೆಯಲ್ಲೇ ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಹೇಳಿದರು.

“ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನನು ವಶಕ್ಕೆ ತೆಗೆದುಕೊಂಡಿದ್ದೇವೆ. ಇವರೆಲ್ಲ 14-16 ವರ್ಷದವರಾಗಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.