62ನೇ ಕೇರಳ ರಾಜ್ಯಮಟ್ಟ ಕಬಡ್ಡಿಗೆ ಇಂದು ಚಾಲನೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : 62ನೇ ಕೇರಳ ರಾಜ್ಯಮಟ್ಟದ ಸೀನಿಯರ್ ಪುರುಷ ಮಹಿಳಾ ಕಬಡ್ಡಿ ಚಾಂಪ್ಯನ್ಶಿಪ್ ಡಿಸೆಂಬರ್ 8, 9, 10ರಂದು ಮಂಜೇಶ್ವರ ಪಂಚಾಯತ್ ಸ್ಟೇಡಿಯಂನಲ್ಲಿ ನಡೆಯಲಿದೆಯೆಂದು ಕಬಡ್ಡಿ ಜಿಲ್ಲಾ ಅಸೋಸಿಯೇಶನ್ ಪದಾಧಿಕಾರಿಗಳು ಮಂಜೇಶ್ವರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಂದು ಸಂಜೆ 5 ಘಂಟೆಗೆ ಜಿಲ್ಲಾಧಿಕಾರಿ ಜೀವನ್ ಬಾಬು ಪಂದ್ಯಾಟಕ್ಕೆ ಚಾಲನೆ ನೀಡುವರು. 3 ದಿನ ನಡೆಯುವ ಪಂದ್ಯಾಟದಲ್ಲಿ 14 ಜಿಲ್ಲೆಯ ಪುರುಷ, ಮಹಿಳಾ ತಂಡಗಳು ಭಾಗವಹಿಸಲಿದೆ. 8ರಂದು ಸಂಜೆ ಮಂಜೇಶ್ವರ ಒಳಗಿನ ಪೇಟೆಯಿಂದ ಪಂದ್ಯಾಟ ನಡೆಯುವ ಕ್ರೀಡಾಂಗಣಕ್ಕೆ ಕ್ರೀಡಾಪಟುಗಳನ್ನು ಒಳಗೊಂಡ ಬೃಹತ್ ಮೆರವಣಿಗೆ ನಡೆಯಲಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.