ಇನ್ಫೋಸಿಸ್ಸಿಗೆ ವಾರ್ಷಿಕ 6,000 ಇಂಜಿನಿಯರುಗಳ ನೇಮಕಾತಿ

ನವದೆಹಲಿ : ಇತ್ತೀಚೆಗೆ ಇನ್ಫೊಸಿಸ್ ಆಡಳಿತ ಮಂಡಳಿಯಲ್ಲಿ ವಿಚಿತ್ರ ಬೆಳವಣಿಗೆ ನಡೆದಿದ್ದರೂ, ಇನ್ಫೋಸಿಸ್ ವಾರ್ಷಿಕ 6,000 ಇಂಜಿನಿಯರುಗಳನ್ನು ಬಾಡಿಗೆಗೆ ಪಡೆದುಕೊಳ್ಳಲಿದೆ ಮತ್ತು ಇದೇ ರೀತಿ ಮುಂದಿನ ಒಂದೆರಡು ವರ್ಷ ನೇಮಕಾತಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

“ನಾವು ಈಗಲೂ ನೇಮಕಾತಿ ಮುಂದುವರಿಸಿದ್ದೇವೆ. ಈ ವರ್ಷ ಹೆಚ್ಚುವರಿ 6,000 ಮಂದಿ ಸೇರಿಸಿಕೊಂಡಿದ್ದೇವೆ. ಕಂಪೆನಿಯ ಮಾರುಕಟ್ಟೆ ಅನುಸರಿಸಿ ಮುಂದಿನ ಎರಡು ಆರ್ಥಿಕ ವರ್ಷದಲ್ಲಿ ಇದೇ ರೀತಿಯ ನೇಮಕಾತಿ ಮುಂದುವರಿಯಲಿದೆ” ಎಂದು ಇನ್ಫೋಸಿಸ್ ಹಂಗಾಮಿ ಸಿಇಒ ಮತ್ತು ಎಂಡಿ ಯು ಬಿ ಪ್ರವೀಣ್ ರಾವ್ ಹೇಳಿದರು.