ಅನಧಿಕೃತವಾಗಿ ಚೀರೆಕಲ್ಲು ಸಾಗಿಸುತ್ತಿದ್ದ 6 ಲಾರಿ ವಶ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಅಕ್ರಮವಾಗಿ ಚೀರೆಕಲ್ಲುಗಳನ್ನು ಸಾಗಿಸುತ್ತಿದ್ದ 6 ಲಾರಿಗಳನ್ನು ತಹಶೀಲ್ದಾರ ಜಿ ಎನ್ ನಾಯ್ಕ ನೇತೃತ್ವದ ತಂಡ ಗುರುವಾರ ದಾಳಿ ನಡೆಸಿ ವಶಪಡಿಸಿಕೊಂಡಿದೆ.

ಜಿಲ್ಲೆಯಲ್ಲಿ ಅಕ್ರಮ ಚೀರೆಕಲ್ಲು ಗಣಿಗಾರಿಕೆಗೆ ನಿಷೇಧವಿದ್ದರೂ ಜಿಲ್ಲೆಯಲ್ಲಿ ವ್ಯಾಪಕವಾಗಿ ಚೀರೆಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ ನೇತೃತ್ವದ ತಂಡ ಬಿಣಗಾದಲ್ಲಿ ಕಾರ್ಯಾಚರಣೆ ನಡೆಸಿತ್ತು. ಚೀರೆಕಲ್ಲುಗಳನ್ನು ತುಂಬಿಕೊಂಡು ಅಂಕೋಲಾದಿಂದ ಕಾರವಾರಕ್ಕೆ ತೆರಳುತ್ತಿರುವಾಗ ಬಿಣಗಾದ ಸಮೀಪ ಲಾರಿಯನ್ನು ತಡೆದ ತಹಶೀಲ್ದಾರ ಅವರು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. 6 ವಾಹನಗಳು ಸೇರಿದಂತೆ ಸುಮಾರು 90,000 ರೂಪಾಯಿಗೂ ಹೆಚ್ಚಿನ ಮೌಲ್ಯದ ಚೀರೆಕಲ್ಲನ್ನು ಕಂದಾಯ ಅಧಿಕಾರಿಗಳು ಪಂಚನಾಮೆ ನಡೆಸಿ ಪೆÇಲೀಸ್ ಇಲಾಖೆಯ ಸುಪರ್ದಿಗೆ ನೀಡಿದ್ದಾರೆ. ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ವಾಹನ ಖಾಲಿ ಮಾಡಿ ಚೀರೆಕಲ್ಲನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಶಕ್ಕೆ ನೀಡಿದ್ದಾರೆ.