ಕಾರು ರಿಕ್ಷಾ ಡಿಕ್ಕಿ 6 ಮಂದಿ ಆಸ್ಪತ್ರೆಗೆ

ಅಪಘಾತದಲ್ಲಿ ನುಜ್ಜುಗುಜ್ಜಾದ ರಿಕ್ಷಾ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಇಲ್ಲಿಗೆ ಸಮೀಪದ ಉದುಮ ಪಳ್ಳದಲ್ಲಿ ಕಾರು ಹಾಗೂ ರಿಕ್ಷಾ ಪರಸ್ಪರ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಆರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಸರಗೋಡು ಕಡೆಯಿಂದ ಬೇಕಲದಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯಾಟ ನೋಡಲು ಐದು ಮಂದಿ ಸಂಚರಿಸುತ್ತಿದ್ದ ಕಾರು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ರಿಕ್ಷಾ ಚಾಲಕ ಉದುಮ ಪಳ್ಳ ನಿವಾಸಿ ಶಶಿ ಎಂಬಾತನನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.
ಅಪಘಾತದಲ್ಲಿ ರಿಕ್ಷಾ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗ ಹಾನಿಯಾಗಿದೆ.