ಎಪಿ-ಇಕೆ ಘರ್ಷಣೆ : 6 ಮಂದಿ ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಭಯೋತ್ಪಾದನೆ ವಿರುದ್ಧ ಎಸ್ ವೈ ಎಸ್ ಕಡಂಬಾರಿನಲ್ಲಿ ನಡೆಸಿದ ಮಾನವ ರಕ್ಷಾ ಸಮ್ಮೇಳನದಲ್ಲಿ ಎಪಿ-ಇಕೆ ಪಂಗಡಗಳ ಮಧ್ಯೆ ಘರ್ಷಣೆ ನಡೆದಿದೆ.

mjr3-fight2

ಎರಡೂ ವಿಭಾಗದವರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಇ ಕೆ ಕಾರ್ಯಕರ್ತರಾದ ಕಡಂಬಾರ್ ಮೊಯ್ದೀನ್, ಕುಂಞÂಮೋನು, ರಫೀಕ್ ಎಂಬವರು ನುಳ್ಳಿಪ್ಪಾಡಿ ಆಸ್ಪತ್ರೆಯಲ್ಲಿ ಮತ್ತು ಎಪಿ ಬಣದ ಎಸ್ ವೈ ಎಸ್ ಕಾರ್ಯಕರ್ತರಾದ ಕಾಜೂರು ಕರೀಂ, ಎ ಎಸ್ ಮುನೀರ್, ಮಜಿಬೈಲ್ ಸಲೀಂ ಎಂಬವರು ಕುಂಬಳೆ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

ಮಾನವ ರಕ್ಷಾ ಸಮ್ಮೇಳನ ವೇಳೆ ಕಡಂಬಾರ್ ಮಹಲ್ ಖತೀಬ್ ಮುಹಿಯುದ್ದೀನ್ ಅಸ್ ಹರಿಯವರ ನೇತೃತ್ವದಲ್ಲಿ ಸುಮಾರು 50ರಷ್ಟು ಮಂದಿ ಮಾರಕಾಯುಧಗಳಿಂದ ಆಗಮಿಸಿ ಹಲ್ಲೆಗೈದಿರುವುದಾಗಿ ಎಪಿ ವಿಭಾಗ ಕಾರ್ಯಕರ್ತರು ಆರೋಪಿಸಿದರೆ, ಕಾಂತಪುರಂ ವಿಭಾಗದ ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬರ ವಿರುದ್ಧ ವೈಯಕ್ತಿಕವಾಗಿ ತೇಜೋವಧೆ ನಡೆಸುವಂತಹ ಮಾತನಾಡಿರುವುದಾಗಿ ಇಕೆ ಬಣದ ಕಾರ್ಯಕರ್ತರು ದೂರಿದ್ದಾರೆ.