6 ಸಿಪಿಐಎಂ ಕಾರ್ಯಕರ್ತರ ಬಂಧನ

ಕೊಲೆಯಾದ ಸಂತೋಷ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕೇರಳದ ಕಣ್ಣೂರು ಜಿಲ್ಲೆಯ ಅಂದಲೂರಿನಲ್ಲಿ ಬುಧವಾರ ರಾತ್ರಿ ನಡೆದ ಬಿಜೆಪಿ ಕಾರ್ಯಕರ್ತ ಸಂತೋಷ್ (52) ಹತ್ಯೆಯ ಸಂಬಂಧ ಪೊಲೀಸರು ಆರು ಮಂದಿ ಸಿಪಿಐ(ಎಂ) ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಈ ಘಟನೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಧರ್ಮದಂ ಕ್ಷೇತ್ರದ ಸಮೀಪದ ಸ್ಥಳದಲ್ಲಿಯೇ ನಡೆದಿತ್ತು. ಸಂತೋಷ್ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಕೊಲೆ ನಡೆದಿತ್ತು.

ಕೊಲೆ ಖಂಡಿಸಿ ಮರುದಿನ ಕಣ್ಣೂರಿನಲ್ಲಿ ಬಿಜೆಪಿ ಕರೆಯನ್ವಯ ಹರತಾಳವನ್ನೂ ಆಚರಿಸಲಾಗಿತ್ತು. ಘಟನೆಗೆ ಆಡಳಿತ ಸಿಪಿಐ(ಎಂ) ಕಾರಣ ಎಂದು ದೂರಿದ್ದ ಬಿಜೆಪಿ, ಮುಖ್ಯಮಂತ್ರಿ ವಿಜಯನ್ ಅವರು ಈ ಬಗ್ಗೆ ಪ್ರತಿಕ್ರಿಯಿಸಬೇಕೆಂದೂ ಆಗ್ರಹಿಸಿತ್ತು.

ಕಳೆದ ವರ್ಷ ಕಣ್ಣೂರಿನಲ್ಲಿ ಕನಿಷ್ಠ ಆರು ರಾಜಕೀಯ ಕೊಲೆಗಳು ನಡೆದಿದ್ದು, ಸಿಪಿಐ(ಎಂ) ಹಾಗೂ ಆರೆಸ್ಸೆಸ್ ಕಾರ್ಯಕರ್ತರು ದಾಳಿಗಳ ಗುರಿಯಾಗಿದ್ದರು. ರಾಜಕೀಯ ಸೂಕ್ಷ್ಮ ಪ್ರದೇಶವಾದ ಕಣ್ಣೂರಿನಲ್ಲಿ ಸಿಪಿಐ(ಎಂ) ಹಾಗೂ ಬಿಜೆಪಿ-ಆರೆಸ್ಸೆಸ್ ಕಾರ್ಯಕರ್ತರ ನಡುವೆ ಸಂಘರ್ಷಗಳು ಸಾಮಾನ್ಯವಾಗಿ ಬಿಟ್ಟಿವೆ.