ಜೂಜಾಟ ನಿರತ 6 ಮಂದಿ ಸೆರೆ

 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಲಾಟರಿ ಮತ್ತು ಮಟ್ಕಾ ಚೀಟಿ ವ್ಯವಹಾರದ ಮೇಲೆ ಜೂಜಾಟ ನಿರತರಾಗಿದ್ದ ತಂಡದ ಮೇಲೆ ದಾಳಿ ನಡೆಸಿದ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಉಪ್ಪಳದ ಚಂದ್ರಶೇಖರ್ ಭಟ್, ಬದಿಯಡ್ಕದ ಕರೀಂ, ಮಂಗಳೂರು ಕೊಟ್ಟಾರದ ಶಿವರಾಮ ಶೆಟ್ಟಿ, ರಾಧಾಕೃಷ್ಣ ಪೈ, ಮಂಜು ಯಾನೆ ಮಂಜುನಾಥ ಮತ್ತು ಎಕ್ಕಾರಿನ ಶಿವಾನಂದ ಬಂಧಿತ ಆರೋಪಿಗಳು

ಆರೋಪಿಗಳಿಂದ 21,900 ರೂ ಮೌಲ್ಯದ ಕೇರಳ ಲಾಟರಿ ಮತ್ತು ಮಟ್ಕಾ ಚೀಟಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ 32,350 ರೂ ನಗದು ಹಣವನ್ನು ಜೂಜಾಟಕ್ಕೆ ಬಳಸಿಕೊಳ್ಳಲಾಗಿದ್ದು, ಇದನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ. ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.