ಮೂಡಬಿದ್ರೆ ಕೃಷಿಸಿರಿಯಲ್ಲಿ 53 ವರ್ಷದ ಬೊನ್ಸೈ ಆಕರ್ಷಣೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಆಳ್ವಾಸ್ ನುಡಿಸಿರಿ ಅಂಗವಾಗಿ ಮೂಡಬಿದ್ರೆಯಲ್ಲಿ ನಡೆದ ಆಳ್ವಾಸ್ ಕೃಷಿ ಸಿರಿಯಲ್ಲಿ 53 ವರ್ಷ ಹಳೆಯ ಬೊನ್ಸೈ ಆಫ್ ಬಬಾಬ್ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ಹೈದ್ರಾಬಾದಿನ ಕ್ರಿಯಾತ್ಮಕ ಬೊನ್ಸೈ ಕಲಾವಿದ ಪಿ ವಿ ಗೋವಿಂದರಾಜ್ ಬೊನ್ಸೈ ಮರಗಳನ್ನು ಪ್ರದರ್ಶಿಸಿದ್ದಾರೆ. ಇವುಗಳು ಆಫ್ರಿಕಾ ಖಂಡದಲ್ಲಿರುವ ಮರಗಳು ಎಂದು ಅವರು ವಿವರಿಸಿದ್ದಾರೆ.

ಮುತ್ತಿನ ನಗರ ಹೈದ್ರಾಬಾದ್ ಸುಮಾರು 600 ವರ್ಷಗಳ ಹಳೆಯ ಮರವನ್ನು ಹೊಂದಿದೆ. ಪ್ರದರ್ಶನದಲ್ಲಿದ್ದ ಇತರ ಹಳೆಯ ಬೊನ್ಸೈ ಮರಗಳಲ್ಲಿ 1974ರ 43 ವರ್ಷದ ಫಿಕಸ್ ಹಿಸ್ಪಿಡ ಮತ್ತು 1986ರ 31 ವರ್ಷದ ಆಲದ ಮರ ಜನರನ್ನು ಆಕರ್ಷಿಸುತ್ತಿದ್ದವು.

ಕಲಾ ಪದವೀಧರ ರಾಜ್ ಬೊನ್ಸೈ ಕೃಷಿಯ ಆಸಕ್ತರಾಗಿದ್ದು, ಬೊನ್ಸೈ ಕೃಷಿ ಕೈಗೊಳ್ಳಲು ಆತ ಸಸ್ಯವಿಜ್ಞಾನಿಯೇ ಆಗಬೇಕೆಂದೇನು ಇಲ್ಲ, ಸಸ್ಯಗಳ ಬಗ್ಗೆ ಸ್ವಲ್ಪ ತಿಳುವಳಿಕೆ ಮತ್ತು ಸಾಮಾನ್ಯ ತೋಟಗಾರಿಕೆ ಅರಿವು ಇದ್ದರೆ ಸಾಕು. ಆದರೆ ಒಬ್ಬ ಕಲಾವಿದ ವೃತ್ತಿಪರನಾಗಿ ಮಿಂಚಲು ಬಯಸಿದ್ದರೆ ಮನಸ್ಸನ್ನು ಹೊಂದಿರಬೇಕು ಎಂದು ಅವರು ಹೇಳಿದರು.

ಬೊನ್ಸೈಗೆ ಉತ್ತಮ ಮಾರುಕಟ್ಟೆ ಇದೆ ಎಂದಿರುವ ಗೋವಿಂದರಾಜ್, ಆಸಕ್ತ ಕೃಷಿಕರು ಮತ್ತು ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿರುವ ಇತರರು ಇದನ್ನು ಒಂದು ವೃತ್ತಿಯಾಗಿ ಕೈಗೊಳ್ಳಲು ಅವರು ಸಲಹೆ ನೀಡಿದ್ದಾರೆ.

ಗೋವಿಂದರಾಜ್ ಅವರು ಕಳೆದ 10 ವರ್ಷಗಳಿಂದ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ ಶಾಲೆಯ ಒಂದು ಎಕ್ರೆ ಭೂಮಿಯಲ್ಲಿ ಬೊನ್ಸೈ ತೋಟಗಾರಿಕೆ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.