ಆಫ್ಘಾನ್ ನಗರಗಳಲ್ಲಿ ಬಾಂಬ್ ಸ್ಫೋಟ : 50 ಮಂದಿ ಸಾವು

ಕಂದಹಾರ್ : ಕಾಬೂಲ್ ಸಹಿತ ಆಫ್ಘಾನಿನ ಮೂರು ನಗರದಾದ್ಯಂತ ತಾಲಿಬಾಲ್ ಉಗ್ರರು ನಡೆಸಿದ ಬಾಂಬ್ ಸ್ಫೋಟದಲ್ಲಿ ಸುಮಾರು 50 ಮಂದಿ ಮೃತಪಟ್ಟಿದ್ದಾರೆ.

ಯುಎಇ ರಾಯಭಾರಿ ಆಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದಕ್ಷಿಣ ಕಂದಹಾರಿನ ಗವರ್ನರರ ಕಂಪೌಂಡಿನೊಳಗಿನ ಸೋಫಾವೊಂದರಲ್ಲಿ ಅಡಗಿಸಿಟ್ಟಿದ್ದ ಬಾಂಬ್ ಸ್ಫೋಟಗೊಂಡಿದ್ದು, ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.

ಇದಕ್ಕೆ ಒಂದು ತಾಸು ಮುಂಚೆ ಕಾಬೂಲ್ ಸರ್ಕಾರದ ಅಧಿಕೃತ ಕಚೇರಿಯ ಬಳಿ ಅವಳಿ ಬಾಂಬ್ ಸ್ಫೋಟಗೊಂಡಿದ್ದು, ಕನಿಷ್ಠ 30 ಮಂದಿ ಮೃತಪಟ್ಟು, 80ರಷ್ಟು ಮಂದಿ ಗಾಯಗೊಂಡಿದ್ದಾರೆ.

ಹೆಲ್ಮಂಡ್ ಪ್ರಾಂತ್ಯದ ಲಷ್ಕರ್ ಗಹದಲ್ಲಿ ನಿನ್ನೆ ಆತ್ಮಾಹುತಿ ಬಾಂಬರನೊಬ್ಬ ಏಳು ಮಂದಿಯ ಸಾವಿಗೆ ಕಾರಣನಾಗಿದ್ದಾನೆ. ಇದೀಗ ಇಲ್ಲಿ ತಾಲಿಬಾನ್ ಸಹಿತ ಅಲ್-ಖೈದಾ ಮತ್ತು ಐಎಸ್ ಭಯೋತ್ಪಾದಕರ ಅಟ್ಟಹಾಸ ಮುಟ್ಟಹಾಕಲು ಅಮೆರಿಕ ಬೆಂಬಲಿತ ಭದ್ರತಾ ಪಡೆಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿವೆ.