ಚುಚ್ಚುಮದ್ದು ಪಡೆದ ಐದು ವಿದ್ಯಾರ್ಥಿಗಳು ಆಸ್ಪತ್ರೆಗೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಸರಕಾರದ ನಿರ್ದೇಶದನುಸಾರ ಅರೋಗ್ಯ ಇಲಾಖೆ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾದ ಮಿಸೇಲ್ ರುಬೆಲ್ಲ ಚುಚ್ಚುಮದ್ದಿನಿಂದಾಗಿ ಸುಮಾರು ಐದು ಮಂದಿ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ದೂರಲಾಗಿದೆ.

ಕಿಡ್ನಿ ವೈಫಲ್ಯವಿರುವ ವಿದ್ಯಾರ್ಥಿನಿ ಸಹಿತ ಹಲವು ವಿದ್ಯಾರ್ಥಿಗಳು ಚುಚ್ಚು ಮದ್ದು ಬೇಡವೆಂದು ಹೇಳಿದರೂ ಶಾಲಾ ಅಧಿಕೃತರು ಹಾಗೂ ಆರೋಗ್ಯ ಇಲಾಖೆ ಬಲವಂತವಾಗಿ ಚುಚ್ಚುಮದ್ದು ನೀಡಿರುವುದಾಗಿ ದೂರಲಾಗಿದೆ.

ಮುಳಿಯಾರ್ ಪಂ ಪೂವ್ವಲ್ ಜಿಯುಪಿಎಸ್ ಶಾಲೆಯಲ್ಲಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.