ಅಪಘಾತ : ಐವರು ಆಸ್ಪತ್ರೆಗೆ

ಯಲ್ಲಾಪುರ : ಪಟ್ಟಣದ ಕೆ ಮಿಲನ ಹೋಟೆಲ್ ಬಳಿ ಲಾರಿ ಹಾಗೂ ಮಿನಿಲಾರಿ ನಡುವೆ ಅಪಘಾತ ಸಂಭವಿಸಿ ಐವರು ಗಾಯಗೊಂಡಿದ್ದಾರೆ.

ಮಿನಿ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಹುಬ್ಬಳ್ಳಿಯ ಪ್ರಸನ್ನ ನಿಂಗಪ್ಪ ಪ್ಯಾಟಿ, ವೇಣುಗೋಪಾಲ ವಾಸುದೇವ ಎಚ್ ಬಿ, ಉಣಕಲ್ಲಿನ ಮಹಮ್ಮದ ಅಲಿ ನಬಿಸಾಬ, ಸೊರಬದ ಚನ್ನಬಸವ ಮಂಜಪ್ಪ ಬಸೆಟ್ಟರ್, ಹಾನಗಲ್ಲಿನ ಮುಸ್ತಾಕ ಖಾನ್ ಇಸ್ಮಾಯಿಲ ಖಾನ್ ಮುಲ್ಲಾ ಗಾಯಗೊಂಡವರು. ಲಾರಿ ಚಾಲಕ ವಾಹನವನ್ನು ಬಿಟ್ಟು ನಾಪತ್ತೆಯಾಗಿದ್ದಾನೆ. ಗಾಯಾಳುಗಳನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಸಾಗಿಸಲಾಗಿದೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.