ಭಾರೀ ಗಾಳಿ-ಮಳೆಗೆ ಮನೆ ಕುಸಿದು ಐವರು ಆಸ್ಪತ್ರೆಗೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಶನಿವಾರ ಬೆಳಿಗ್ಗೆ ಸುರಿದ ಭಾರೀ ಗಾಳಿ-ಮಳೆಗೆ ಬಂಗ್ರ ಮಂಜೇಶ್ವರದಲ್ಲಿ ಮನೆಯೊಂದು ಕುಸಿದು ಬಿದ್ದಿದೆ.

ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ಕ್ಷೇತ್ರ ಸಮೀಪ ನಿವಾಸಿ ಅಬ್ದುಲ್ ಅಝೀಝ್ (60) ಮನೆ ಕುಸಿದು ಬಿದ್ದಿದೆ. ಈ ಸಂದರ್ಭ ಮನೆಯೊಳಗಿದ್ದ ಅಬ್ದುಲ್ ಅಝೀಝ್ (60) ಪತ್ನಿ ಮೈಮೂನ ಹಾಗೂ ಮನೆ ಕಾಮಗಾರಿಗಾಗಿ ಬಂದಿದ್ದ ಕಾರ್ಮಿಕರಾದ ಸಂಜೀವ, ಉಮೇಶ ಹಾಗೂ ಭೀಮವ್ವರನ್ನು ಮಂಜೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.