ಲಾರಿ ಮಗುಚಿ ಇಬ್ಬರಿಗೆ ಗಾಯ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಲಾರಿಯೊಂದು ಮಗುಚಿ ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಸಣ್ಣಪುಟ್ಟ ತರಚಿದ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆ 34ನೇ ನೆಕ್ಕಿಲಾಡಿ ಬಳಿಯ ಬೊಳ್ಳಾರ್‍ನಲ್ಲಿ ಬುಧವಾರ ಸಂಜೆ ಸಂಭವಿಸಿದೆ

ಮಂಗಳೂರಿನಿಂದ ಕಲ್ಲಿದ್ದಲನ್ನು ಹೇರಿಕೊಂಡು ತುಮಕೂರಿಗೆ ತೆರಳುತ್ತಿದ್ದ ಲಾರಿಯು ಬೊಳ್ಳಾರಿನ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಬಿದ್ದ ರಭಸಕ್ಕೆ ಲಾರಿಯು ಬಿದ್ದ ಸ್ಥಿತಿಯಲ್ಲಿಯೇ ಸುಮಾರು 20-30 ಮೀಟರಿನಷ್ಟು ದೂರ ರಸ್ತೆಯಲ್ಲಿ ಜಾರಿಕೊಂಡು ಹೋಗಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಚರಂಡಿಗೆ ಸಿಲುಕಿ ನಿಂತುಕೊಂಡಿದೆ. ಘಟನೆಯಿಂದ ಚಾಲಕ ಬೆಂಗಳೂರು ಮೂಲದ ಭರತ್ ಹಾಗೂ ಕ್ಲೀನರ್ ಸಣ್ಣಪುಟ್ಟ ತರಚಿದ ಗಾಯದಿಂದ ಅಪಾಯದಿಂದ ಪಾರಾಗಿದ್ದಾರೆ.