ಲಾಡ್ಜಿಗೆ ಪೊಲೀಸ್ ದಾಳಿ

ಮಂಗಳೂರು : ನಗರದ ಹೊರವಲಯದ ಲಾಡ್ಜೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಗೆ ದಾಳಿ ನಡೆಸಿದ ಗ್ರಾಮಾಂತರ ಠಾಣಾ ಪೊಲೀಸರು ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಲ್ಲಿ ಮೂವರು ಯುವಕರಾದರೆ ಇಬ್ಬರು ಯುವತಿರೆಂದು ತಿಳಿದುಬಂದಿದೆ.

ಖಚಿತ ಮಾಹಿತಿಯನ್ನಾಧರಿಸಿ ಗ್ರಾಮಾಂತರ ಠಾಣಾ ಪೊಲೀಸರು ನಗರ ಠಾಣಾ ವ್ಯಾಪ್ತಿಯ ನಾಗುರಿ ಎಂಬಲ್ಲಿರುವ ಕಾಂಪ್ಲೆಕ್ಸಿಗೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಮೂವರು ಯುವಕರು ಹಾಗೂ ಇಬ್ಬರು ಯುವತಿಯರಿದ್ದು, ಬಂಧಿತ ಆರೋಪಿಗಳನ್ನು ಮನೋಜ್, ಆಯುಷ್ ಮತ್ತು ದುರ್ಗೇಶ್ ಎಂದು ಗುರುತಿಸಲಾಗಿದೆ. ಯುವತಿಯರಿಬ್ಬರೂ ಅನ್ಯ ರಾಜ್ಯದವರಾಗಿದ್ದು, ವ್ಯವಹಾರ ನಡೆಸಲು ಜಿಲ್ಲೆಗೆ ಆಗಮಿಸಿದ್ದರು ಎಂದು ಹೇಳಲಾಗಿದೆ.