ರಾಜ್ಯ ಹೈಕೋರ್ಟಿಗೆ 5 ಮಂದಿ ಹೆಚ್ಚು ನ್ಯಾಯಾಧೀಶರ ನೇಮಕ

ನವದೆಹಲಿ : ಕರ್ನಾಟಕ ಹೈಕೋರ್ಟ್ ಐದು ಮಂದಿ  ಹೆಚ್ಚುವರಿ ನ್ಯಾಯಾಧೀಶರುಗಳನ್ನು ಪಡೆಯಲಿದೆ. ದೀಕ್ಷಿತ್ ಕೃಷ್ಣ ಶ್ರೀಪಾದ್,  ಶಂಕರ್ ಗಣಪತಿ ಪಂಡಿತ್, ರಾಮಕೃಷ್ಣ ದೇವದಾಸ್, ಭೊತನ್ ಹೊಸೂರ್ ಮಲ್ಲಿಕಾರ್ಜುನ ಶ್ಯಾಮ್ ಪ್ರಸಾದ್ ಹಾಗೂ ಸಿದ್ದಪ್ಪ ಸುನಿಲ್ ದತ್ತ್ ಯಾದವ್ ಅವರೇ ರಾಷ್ಟ್ರಪತಿಗಳಿಂದ ಹೊಸದಾಗಿ ನೇಮಕಗೊಂಡ ಹೆಚ್ಚುವರಿ ನ್ಯಾಯಾಧೀಶರು. ಈ ಐದು ಮಂದಿಯೂ ಮುಂದಿನ ಎರಡು ವರ್ಷಗಳ ಕಾಲ ತಾತ್ಕಾಲಿ ನ್ಯಾಯಾಧೀಶರುಗಳಾಗಿ ಮುಂದುವರಿಯಲಿದ್ದಾರೆ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟಿನ ಕೊಲೀಜಿಯಂ ಅವರ ಹೆಸರುಗಳನ್ನು ಶಿಫಾರಸು ಮಾಡಿತ್ತು.

LEAVE A REPLY