ದೇಶದಲ್ಲಿ 450 ಮಂದಿಗೆ ಐಎಸ್ ನಂಟು : ಕೇಂದ್ರ

ನವದೆಹಲಿ : ಭಾರತದಲ್ಲಿ ಕಳೆದ ವರ್ಷದವರೆಗೆ 250 ಮಂದಿ ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಜತೆ ನಂಟು ಹೊಂದಿದ್ದರೆ, ಈಗ ಈ ಸಂಖ್ಯೆ 500ಕ್ಕೆ ಏರಿದ್ದು, ಇವರ ಮೇಲೆ ಒಂದು ಕಣ್ಣಿಡಲಾಗಿದೆ ಎಂದು ಹೈದರಾಬಾದಿನಲ್ಲಿ ನಡೆದ ವಾರ್ಷಿಕ ಪೊಲೀಸ್ ಮಹಾ ನಿರ್ದೇಶಕರ ಸಮಾವೇಶದಲ್ಲಿ ಗುಪ್ತಚರ ಬ್ಯೂರೋ(ಐಬಿ) ತಿಳಿಸಿದೆ.

“ದೇಶದಲ್ಲಿ ಐಎಸ್ ಅನುಯಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಅಪಾಯಕಾರಿಯಾಗಿದೆ” ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದರು.