4ರ ಬಾಲೆ ಅತ್ಯಾಚಾರ ; ಕಣ್ಣುಗುಡ್ಡೆ ಕಿತ್ತು ಹಾಕಿ ಕೈಕಡಿದು ಬರ್ಬರ ಕೊಲೆ : ವಾಮಾಚಾರ ಶಂಕೆ

ಜಮ್ಶೆಡ್ಪುರ : ಜಾರ್ಖಂಡ್ ರಾಜ್ಯದಲ್ಲಿ ವಾಮಾಚಾರ ಜಾರಿಯಲ್ಲಿರುವುದಕ್ಕೆ ಮತ್ತೊಂದು ಸಾಕ್ಷ್ಯಿ ಸಿಕ್ಕಿದೆ. ಈ ಬಾರಿ ದುಷ್ಕಮಿಗಳು 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ಕಣ್ಣುಗುಡ್ಡೆ ಕಿತ್ತು, ಕೈಗಳನ್ನು ಕತ್ತರಿಸಿ, ಕೊಲೆಗೈದ ಹೇಯ ಕೃತ್ಯವೊಂದು ನಡೆದಿದೆ.

ಡಿ 15ರಿಂದ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಪೂರ್ವ ಸಿಂಗ್ಬಂ ಕಿಲ್ಲೆಯ ಗ್ರಾಮವೊಂದರಲ್ಲಿ ನಿನ್ನೆ ಪತ್ತೆಯಾಗಿದ್ದು, ಮೈಮೇಲೆ ಹಲವು ಗಾಯಗಳು ಕಂಡುಬಂದಿದೆ. ಈ ಕೊಲೆಯ ಹಿಂದೆ ಮಾಂತ್ರಿಕನೊಬ್ಬನ ಕೈವಾಡವಿರಬೇಕೆಂದು ಹಳ್ಳಿಗರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಕುಟುಂಬ ಸದಸ್ಯರು ಅಥವಾ ಬಾಲಕಿಯ ಪರಿಚಯಸ್ಥರು ಒಳಗೊಂಡಿರುವ ಸಾಧ್ಯತೆಯನ್ನು ಪೊಲೀಸರು ಅಲ್ಲಗಳೆದಿಲ್ಲ.

ಅಂಗಾಂಗ ಕಸಿ-ಮಾರಾಟ ಜಾಲದ ಕೈವಾಡವಿರುವ ಸಂಭವವಿದೆ. ಕಿಡ್ನಿ ತೆಗೆಯಲಾಗಿದೆಯೇ ಎಂಬುದರ ಪರೀಕ್ಷೆ ನಡೆಯುತ್ತಿದೆ ಮತ್ತು ಬೀದಿ ನಾಯಿಗಳ ದಾಳಿಯಿಂದ ಈಕೆಯ ಕಣ್ಣುಗುಡ್ಡೆಗಳು ಹೊರಬಿದ್ದಿದೆಯೇ ಎಂಬ ಸಂದೇಹವೂ ಇದೆ.

ಡಿ 16ರಂದು ರಾಂಚಿ ಸದರ್ ಪೊಲೀಸ್ ಠಾಣಾ  ವ್ಯಾಪ್ತಿ ಬೂಟಿ ಬಸ್ತಿಯಲ್ಲಿ 10 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ  ನಡೆಸಿ, ಸುಟ್ಟುಹಾಕಲಾದ ಘಟನೆ ನಡೆದಿತ್ತು. ದಿಲ್ಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಬರ್ಬರ ಅತ್ಯಾಚಾರ ಕೊಲೆಯಾದ ನಾಲ್ಕು ವರ್ಷಗಳ ಬಳಿಕ ನಡೆದ ಮತ್ತೊಂದು ಬರ್ಬರ ಘಟನೆ ಇದಾಗಿದೆ.