7 ದ್ವಿಚಕ್ರ ವಾಹನ ಸಹಿತ ನಾಲ್ವರು ಕಳ್ಳರ ಬಂಧನ

ಮಂಗಳೂರು : ನಗರದ ವಿವಿಧ ಪೆÇಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಅವರಿಂದ 7 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಬಂಧಿತರು ಕದ್ರಿಯ ಅಫ್ರಿಮ್ ಶಿಯಾದ್ (20), ಕಾಟಿಪಳ್ಳದ ಹಂಝ (19), ರಾಘವೇಂದ್ರ ಮಠದ ಬಳಿಯ ಬಾಲಸುಬ್ರಹ್ಮಣ್ಯ (37) ಮತ್ತು ಬಂಟ್ವಾಳ ಫರಂಗಿಪೇmಯ ಕಾರ್ತಿಕ್ ಸುವರ್ಣ (20).

ಆರೋಪಿಗಳೆಲ್ಲರೂ ಮಂಗಳೂರು ಉತ್ತರ ಪೆÇಲೀಸ್ ಠಾಣಾ ವ್ಯಾಪ್ತಿಯ ತ್ರಿಶೂಲೇಶ್ವರ ದೇವಸ್ಥಾನದ ಬಳಿಯಲ್ಲಿ ನೊಂದಣಿ ಸಂಖ್ಯೆಯಿರದ ರಾಯಲ್ ಎನ್ ಫೀಲ್ಡ್ ದ್ವಿಚಕ್ರ ವಾಹನದಲ್ಲಿ ಅನುಮಾನಸ್ಪದ ರೀತಿಯಲ್ಲಿ ತಿರುಗಾಡಿಕೊಂಡಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.

ಇವರು ಕಳವುಗೈದ ಒಟ್ಟು 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳಲ್ಲಿ ರೋಯಲ್ ಎನ್ ಫೀಲ್ಡ್ ಬುಲೆಟ್, ಯಮಹಾï ಝೆಡ್ 3, ಹೀರೋ ಹೊಂಡಾ ಸ್ಲ್ಪೆಂಡರ್, ಯಮಹಾ ಹಾಗೂ ಆ್ಯಕ್ಟಿವಾ ಹೊಂಡಾ ಇವೆ.

ಒಂದು ರೋಯಲ್ ಎನ್ ಫೀಲ್ಡ್ ಬುಲೆಟ್, ಯಮಹಾ ಎಫ್ ಝೆಡ್ ಬೈಕನ್ನುನ್ನು 10 ದಿನಗಳ ಹಿಂದೆ ಮಂಗಳೂರು ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರ್ ಹಾಗೂ ಮೇರ್ಲಪದವುನಿಂದ  ಹಾಗೂ ಇತರ ಬೈಕುಗಳನ್ನು ಮಂಗಳೂರು ನಗರದ ವಿವಿಧ ಕಡೆಗಳಿಂದ ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ವಶಪಡಿಸಿಕೊಂಡ 7 ದ್ವಿಚಕ್ರ ವಾಹನಗಳ ಹಾಗೂ 5 ಮೊಬೈಲ್ ಫೆÇೀನ್ ಒಟ್ಟು ಮೌಲ್ಯ ರೂ 4,67,000 ಎಂದು ಅಂದಾಜಿಸಲಾಗಿದೆ.

ಬಂಧಿತರು ಕುಖ್ಯಾತ ಕಳ್ಳರಾಗಿದ್ದು, ಇವರ ವಿರುದ್ಧ ನಗರದ ಬಜ್ಪೆ, ಮಂಗಳೂರು ಉತ್ತರ, ಮಂಗಳೂರು ಪೂರ್ವ, ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಒಟ್ಟು 6 ಮನೆ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.

ಬಂಧಿತರನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಉತ್ತರ ಪೆÇಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.