4 ಗ್ರಾಮಕರಣಿಕರ ಅಮಾನತು

ಸಾಂದರ್ಭಿಕ ಚಿತ್ರ

ಕಚೇರಿಯಲ್ಲಿ ಖಾಸಗಿ ಸಿಬ್ಬಂದಿ ನೇಮಕ

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಕಚೇರಿಯಲ್ಲಿ ಖಾಸಗಿ ಸಿಬ್ಬಂದಿ ನೇಮಿಸಿಕೊಂಡು ಕಡತಗಳನ್ನು ತಯಾರು ಮಾಡುತ್ತಿದ್ದ ಆರೋಪದಲ್ಲಿ ಪುತ್ತೂರು ತಾಲೂಕಿನ ನಾಲ್ವರು ಗ್ರಾಮಕರಣಿಕರನ್ನು ಪುತ್ತೂರು ಎಸಿ ಅಮಾನತು ಮಾಡಿದ್ದಾರೆ.

ಗ್ರಾಮಕರಣಿಕರು ಕಚೇರಿ ಬಿಟ್ಟು ಹೊರಗಿನ ಕೆಲಸಕ್ಕೆ ತೆರಳುವ ವೇಳೆ ಕಚೇರಿಯಲ್ಲಿ ಸಿಬ್ಬಂದಿ ಇರುವುದಿಲ್ಲ ಮತ್ತು ಕಡತಗಳನ್ನು ತಯಾರು ಮಾಡುವುದು ಕಷ್ಟವಾಗುತ್ತದೆ ಎಂದು ನಾಲ್ವರು ಗ್ರಾಮಕರಣಿಕರು ಖಾಸಗಿ ಸಿಬ್ಬಂದಿ ನೇಮಿಸಿ ಅವರಿಗೆ ಸ್ವಂತವಾಗಿ ವೇತನವನ್ನು ನೀಡುತ್ತಿದ್ದರು. ಈ ಕುರಿತು ಸಾರ್ವಜನಿಕರು ಪುತ್ತೂರು ಎಸಿಯವರಿಗೆ ದೂರು ನೀಡಿದ್ದರು. ಇದನ್ನಾಧರಿಸಿ ಕಚೇರಿಗೆ ದಾಳಿ ಮಾಡಿದ ಎಸಿ ಸಿಬ್ಬಂದಿ ನೇಮಿಸಿಕೊಂಡಿರುವ ನಾಲ್ಕು ಮಂದಿ ಗ್ರಾಮಕರಣಿಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪುತ್ತೂರು ತಾಲೂಕಿನಲ್ಲಿ 44 ಗ್ರಾಮಕರಣಿಕರಿದ್ದು, ಬಹುತೇಕ ಗ್ರಾಮಕರಣಿಕರ ಕಚೇರಿಯಲ್ಲಿ ಖಾಸಗಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.