ಕಲಬುರಗಿಯಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ಕಲಬುರಗಿ : ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣಾದ ದಾರುಣ ಘಟನೆ ಶನಿವಾರ ಕಲಬುರಗಿ ನಗರದ ಸರಸ್ವತಿಪುರ ಬಡಾವಣೆಯ ಮನೆಯೊಂದರಲ್ಲಿ ನಡೆದಿದೆ. ಶ್ರೀಕಾಂತ್, ಪತ್ನಿ ತನುಶ್ರೀ ಹಾಗು ಇಬ್ಬರು ಮಕ್ಕಳಾದ ಸಾಕ್ಷಿ ಮತ್ತು ಚೇತನ ಮೃತ ದುರ್ದೈವಿಗಳು. ಸಾವಿಗೂ ಮುನ್ನ ಇವರು ಡೆತ್ ನೋಟ್ ಬರೆದಿಟ್ಟಿದ್ದು, `ನಮ್ಮ ಸಾವಿಗೆ ನಾವೇ ಕಾರಣ ಬೇರೆ ಯಾರು ಕಾರಣರಲ್ಲ ನಮ್ಮ ದೇಹಗಳನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡಿ’ಅಂತ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.