ರಾಜ್ಯದಲ್ಲಿ 4 ಲಕ್ಷ ಟ್ರಕ್ ಸ್ಥಗಿತ

ಬೆಂಗಳೂರು : ನಿನ್ನೆ ಆರಂಭವಾದ ಎರಡು ದಿನಗಳ ರಾಷ್ಟ್ರವ್ಯಾಪಿ ಟ್ರಕ್ ಮುಷ್ಕರದಿಂದ ರಾಜ್ಯದಲ್ಲಿ ನಾಲ್ಕು ಲಕ್ಷ ಟ್ರಕ್ಕುಗಳು ಸ್ಥಗಿತಗೊಂಡಿವೆ. ಜಿಎಸ್‍ಟಿ, ಡೀಸೆಲ್ ಬೆಲೆ ಏರಿಕೆ ಮತ್ತು ರಸ್ತೆಯಲ್ಲಿ ಕಿರುಕುಳ ವಿರೋಧಿಸಿ ಟ್ರಕ್ ಮಾಲಕರು ಮತ್ತು ಚಾಲಕರು ಟ್ರಕ್ ಬಂದ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.