ಬಾಲಕರ ಸಹಿತ ನಾಲ್ವರ ಬಂಧನ

ಯುವಕಗೆ ಬೆದರಿಕೆಯೊಡ್ಡಿ ಹಣ, ಮೊಬೈಲ್ ದರೋಡೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಯುವಕನನ್ನು ತಡೆದು ಬೆದರಿಕೆಯೊಡ್ಡಿ ಹಣ ಹಾಗೂ ಮೊಬೈಲ್ ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಾಲಕ ಸಹಿತ ನಾಲ್ಕು ಮಂದಿಯನ್ನು ಪೆÇಲೀಸರು ಬಂಧಿಸಿದ್ದಾರೆ.

ಸಂತೋಷ್ ನಗರ ಮೈಮನ ನಗರದ ಮೊಹಮ್ಮದ್ ಸುಹೈಬ್ (21), ಅಣಂಗೂರು ಟಿ ವಿ ಸ್ಟೇಶನ್ ರಸ್ತೆಯ ಮೊಹಮ್ಮದ್ ರಿಯಾಝ್ (19) ಹಾಗೂ 17 ವರ್ಷ ಪ್ರಾಯದ ಇಬ್ಬರು ಬಂಧಿತ ಆರೋಪಿಗಳು.

ಕಳನಾಡ್ ಚಂದ್ರಗಿರಿ ಎಂ ಎಂ ಹೌಸಿನ ಮೊಹಮ್ಮದ್ ರಿಯಾಝ(30)ನ ಎಂಟು ಸಾವಿರ ರೂ.ಗಳನ್ನೊಳಗೊಂಡ ಪರ್ಸ್ ಹಾಗೂ ಮೊಬೈಲುಗಳನ್ನು ದರೋಡೆಗೈದ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿದೆ. ಸೆಪ್ಟೆಂಬರ್ 12ರಂದು ರಾತ್ರಿ ಆಲಂಪಾಡಿ ಸೇತುವೆ ಬಳಿ ಈ ಘಟನೆ ನಡೆದಿತ್ತು.