ಪಡುಪಣಂಬೂರು ಬಳಿ ಕಾರಿಗೆ ಬಸ್ ಡಿಕ್ಕಿ : ನಾಲ್ವರು ಗಂಭೀರ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66 ಪಡುಪಣಂಬೂರು ಕಿರುಸೇತುವೆ ಬಳಿ ಬಸ್ಸೊಂದು ಕಾರಿಗೆ ಡಿಕ್ಕಿಯಾದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

mulki-bus

ದಾವಣಗೆರೆಯಿಂದ ಮಂಗಳೂರಿಗೆ ಬರುತ್ತಿದ್ದ ಶ್ರೀ ದುರ್ಗಾಂಬ ಹೆಸರಿನ ಬಸ್ ಕೇರಳದ ಮಲ್ಲಪುರಂನಿಂದ ಭಟ್ಕಳ ಕಡೆ ಹೋಗುತ್ತಿದ್ದ ರಿಟ್ಝ್ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ರಭಸಕ್ಕೆ ಮೂರು ಪಲ್ಟಿಯಾಗಿ ಡಿವೈಡರ್ ಮೇಲೆ ಹೋಗಿ ನಿಂತಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಬಸ್ಸಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದ ಕೇರಳದ ಮಲ್ಲಪುರಂನ ನಾಲ್ವರು ಗಂಭೀರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡವರು ಅಬ್ದುಲ್ ಶುಕುರ್,ಮಿದಿಲ್ ರಾಜ್, ಸಫ್ವಾನ್, ಅಯೂಬ್ ಎಂದು ತಿಳಿದುಬಂದಿದೆ.

ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದಿಂದ ಕೆಲ ಕಾಲ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು.

ಎರಡು ಹಿಂದೆ ಇದೇ ಸ್ಥಳದಲ್ಲಿ ಕಂಟೈನರ್ ಹಾಗೂ ಲಾರಿ ನಡುವೆ ಅಪಘಾತ ನಡೆದು ಹೆದ್ದಾರಿ ಸಂಚಾರ ವ್ಯತ್ಯಯಗೊಂಡಿತ್ತು. ಅಪಘಾತದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂಟೈನರ್ 10 ಅಡಿ ಆಳದ ಹೊಂಡಕ್ಕೆ ಬಿದ್ದಿತ್ತು. ಶನಿವಾರ ದೊಡ್ಡ ಕ್ರೇನ್ ಮೂಲಕ ಆ ಕಂಟೈನರನ್ನು ಮೇಲಕ್ಕೆತ್ತಲಾಗಿದೆ.