ಚಾಲಕನ ನಿಯಂತ್ರಣ ತಪ್ಪಿ ಕಾರು ಕಂದಕಕ್ಕೆ : ನಾಲ್ವರು ಗಂಭೀರ

ಅಂಕೋಲಾ : ರಾಷ್ಟ್ರೀಯ ಹೆದ್ದಾರಿ 63ರ ಸುಂಕಸಾಳ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಬೆಂಗಳೂರು ಜಯನಗರದ ಮಕ್ಸೂದ ಮುಲ್ಲಾ ಖಾನ, ಸೋಮೇಶ್ವರ ನಗರದ ಅಮಾನುಲ್ಲಾ ಷರಿಫ, ಶಿವಾಜಿ ನಗರದ ಅಸಾದುಲ್ಲಾ, ಕಾರು ಚಾಲಕ ಬಸವೇಶ್ವರ ನಗರದ ಅಜಂ ಷರೀಫ ಇವರೇ ಗಾಯಗೊಂಡವರಾಗಿದ್ದಾರೆ. ಇವರು ಬೆಂಗಳೂರಿನಿಂದ ಉದ್ಯೋಗದ ನಿಮಿತ್ತ ಗೋವಾಕ್ಕೆ ತೆರಳುತ್ತಿರುವ ವೇಳೆ ಈ ಅವಘಡ ಸಂಭವಿಸಿದೆ. ಗಂಭೀರ ಗಾಯಗೊಂಡ ಇವರನ್ನು 108 ವಾಹನದ ಮೂಲಕ ತಾಲೂಕು ಆಸ್ಪತ್ರೆಗೆ ಕರೆತರಲಾಯಿತು. ಡಾ ಈಶ್ವರಪ್ಪ ಹಾಗೂ ಸಿಬ್ಬಂದಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಮಣಿಪಾಲಕ್ಕೆ ಸಾಗಿಸಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY