ಭಜನಾ ಮಂದಿರಕ್ಕೆ ಹಾನಿ 6 ಮಂದಿ ತಂಡದ ಕೃತ್ಯ

ನಾಲ್ವರು ವಶಕ್ಕೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಕಿಡಿಗೇಡಿಗಳು ಭಜನಾ ಮಂದಿರಕ್ಕೆ ಬೆಂಕಿ, ಕಲ್ಲೆಸೆತದಿಂದ ಹಾನಿಗೊಳಿಸಿದ ಘಟನೆ ಪ್ರುಂಬಳ ಕಪ್ಪಣಯಡ್ಕ ಎಂಬಲ್ಲಿ ಶನಿವಾರ ಮುಂಜಾನೆ ನಡೆದಿದೆ. ಈ ಸಂಬಂಧ ನಾಲ್ವರನ್ನು ಪೆÇಲೀಸರು ವಶಕ್ಕೆ ತೆಗೆದಿದ್ದಾರೆ.

ಘಟನಾ ಸ್ಥಳದಲ್ಲಿ ಘರ್ಷಣೆಗೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ವಾಹನಗಳಲ್ಲಿ ಆಗಮಿಸಿದ ತಂಡವೊಂದು ಭಜನಾ ಮಂದಿರಕ್ಕೆ ಕಲ್ಲೆಸೆದು ಕಿಟಿಕಿ ಗಾಜುಗಳನ್ನು ಪುಡಿಗೈದಿದೆ. ಬಳಿಕ ಆವರಣಗೋಡೆಗೆ ಹೊಂದಿಕೊಂಡಿದ್ದ ಶೀಟಿಗೆ ಕಿಚ್ಚಿಟ್ಟು ನಾಶಗೈದಿದೆ.

mjr2-temple2

ಮಂದಿರದೊಳಗೆ ನಿದ್ರಿಸಿದ್ದ ಅಯ್ಯಪ್ಪ ವೃತಧಾರಿಗಳು ಬೆಂಕಿ ಕಂಡು ಎದ್ದು ಹೊರ ಬರುತ್ತಿರುವಷ್ಟರಲ್ಲಿ ಕಿಡಿಗೇಡಿಗಳು ವಾಹನಗಳಲ್ಲಿ ಪರಾರಿಯಾಗಿದ್ದಾರೆ.

ಬಳಿಕ ಊರವರ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ. ಅಯ್ಯಪ್ಪ ವೃತಧಾರಿಗಳಿಂದ ಮಾಹಿತಿಯನ್ನು ಪಡಕೊಂಡ ಪೆÇಲೀಸರು ಒಬ್ಬನನ್ನು ವಶಕ್ಕೆ ತೆಗೆದು ವಿಚಾರಿಸುವಾಗ ತಂಡದಲ್ಲಿ ಆರು ಮಂದಿಯಿದ್ದ ಬಗ್ಗೆ ಮಾಹಿತಿ ಲಭಿಸಿದೆ. ಇದರಂತೆ ಅವರ ವಿರುದ್ದ ಕೇಸು ದಾಖಲಿಸಿದ ಪೆÇಲೀಸರು ನಾಲ್ಕು ಮಂದಿಯನ್ನು ಹಾಗೂ ಬೈಕನ್ನು ವಶಕ್ಕೆ ತೆಗೆದಿದ್ದಾರೆ.