ಎಂಡೋ ಹೆಸರಲ್ಲಿ ಹಣ ಸಂಗ್ರಹ : ಆರೋಪಿಗಳು ಪೊಲೀಸ್ ಬಲೆಗೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಎಂಡೋ ಸಲ್ಫಾನ್ ಪೀಡಿತರ ಹೆಸರಲ್ಲಿ ಹಣ ಸಂಗ್ರಹ ಮಾಡುತಿದ್ದ ನಾಲ್ಕು ಮಂದಿಯ ತಂಡವೊಂದನ್ನು ಊರವರೇ ಹಿಡಿದು ಪೆÇಲೀಸರಿಗೊಪ್ಪಿಸಿದ್ದಾರೆ. ರಾಜಪುರಂ ಬಂದಡ್ಕ ಭಾಗದಿಂದ ಆಗಮಿಸಿದ ಯುವಕರನ್ನು ಹೊಸದುರ್ಗ ಸಮೀಪದ ರಾವಣೇಶ್ವರ ಪರಿಸರದಲ್ಲಿ ಊರವರು ಸೆರೆ ಹಿಡಿದಿದ್ದಾರೆ.

ಎಂಡೋ ಸಲ್ಫಾನ್ ಪೀಡಿತರಿಗೆ ಸಹಾಯ ಮಾಡುವುದಾಗಿ ಕಳೆದ ಎರಡು ತಿಂಗಳಿನಿಂದ ಒಂದು ಸಂಘಟನೆಯ ನೇತೃತ್ವದಲ್ಲಿ ವ್ಯಾಪಕವಾಗಿ ಹಣ ಸಂಗ್ರಹ ಮಾಡಲಾಗುತ್ತಿತ್ತು. ಈ ಮಾಹಿತಿ ಎಂಡೋ ಸಲ್ಫಾನ್ ಪೀಡಿತರ ಸಂಘಟನೆಯ ಪದಾಧಿಕಾರಿಗಳಿಗೆ ಲಭಿಸಿತ್ತು. ಇದರಂತೆ ಎಂಡೋ ಸಲ್ಫಾನ್ ರಕ್ಷಾ ಸಮಿತಿ ಪದಾಧಿಕಾರಿಯಾದ ರಾವಣೇಶ್ವರ ನಿವಾಸಿ ಎಂ ವಿ ರವೀಂದ್ರನ್ ಎಂಬವರ ಮನೆಗೆ ತಲುಪಿದಾಗ ಮಾಹಿತಿ ಅರಿತು ಅಲ್ಲಿಗೆ ಧಾವಿಸಿದ ಊರವರು ಹಣ ಸಂಗ್ರಹಕ್ಕೆ ಆಗಮಿಸಿದ ನಾಲ್ವರನ್ನು ಸೆರೆ ಹಿಡಿದು ಪೆÇಲೀಸರಿಗೊಪ್ಪಿಸಿದ್ದಾರೆ.


ಮಹಿಳೆಗೆ ಬೆದರಿಕೆ : ಕೇಸು ದಾಖಲು

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಹಿತ್ತಿಲಿಗೆ ನುಗ್ಗಿ ಬಾಯಾರು ಪೆರ್ವಾಡಿ ನಿವಾಸಿ ಇಸ್ಮಾಯಿಲ್ ಅವರ ಪತ್ನಿ ಸುಹರಾ (42) ಅವರಿಗೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಯಾರು ಪೆರ್ವಡಿ ನಿವಾಸಿ ಇಬ್ರಾಹಿಂ ಅವರ ಪುತ್ರ ಇಸ್ಮಾಯಿಲ್ (45) ವಿರುದ್ಧ ಮಂಜೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ.