ಭಜನಾ ಮಂದಿರಕ್ಕೆ ಕಲ್ಲು : ನಾಲ್ವರ ಬಂಧನ

ಹಾನಿಗೀಡಾದ ಭಜನಾ ಮಂದಿರ ವೀಕ್ಷಣೆಗೆ ಆಗಮಿಸಿದ ಸಚಿವ ಇ ಚಂದ್ರ ಶೇಖರ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಪೆರುಂಬಳ ಕಪ್ಪನಡ್ಕದಲ್ಲಿರುವ ಭಜನಾ ಮಂದಿರದ ಕಿಟಿಕಿಯ ಗಾಜುಗಳಿಗೆ ಕಲ್ಲೆಸೆದು ಹಾನಿಗೊಳಿಸಿ, ವರಾಂಡಕ್ಕೆ ಹಾಕಿದ ಶೀಟಿಗೆ ಕಿಚ್ಚಿಟ್ಟು ನಾಶಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ 17 ವಯಸ್ಸಿನ ಯುವಕ ಸೇರಿದಂತೆ ನಾಲ್ವರನ್ನು ಪೆÇಲೀಸರು ಬಂಧಿಸಿದ್ದಾರೆ.

ಚೆಮ್ನಾಡ್ ಕೊಂಬನಡ್ಕ ನಿವಾಸಿ ಎ ಎ ಮರಶೂಕ್ (19), ಕಪ್ಪನಡ್ಕ ಹಳೆಯ ಅಂಗನವಾಡಿ ಪರಿಸರವಾಸಿ ಪಿ ಬಿ ಮೊಹಮ್ಮದ್ ರಾಶಿದ್ (18), ಕಪ್ಪನಡ್ಕ ವಾಟರ್ ಟ್ಯಾಂಕ್ ಪರಿಸರವಾಸಿ ಕೆ ಉಮ್ಮರ್ ಫಾರೂಕ್ (19) ಹಾಗೂ 17 ವರ್ಷದ ಯುವಕ ಸೆರೆಗೀಡಾದ ಆರೋಪಿಗಳಾಗಿದ್ದಾರೆ.

ಶನಿವಾರ ಮುಂಜಾನೆ 2.30ರ ಸುಮಾರಿಗೆ ಈ ಘಟನೆ ನಡೆದಿತ್ತು. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸುವುದಾಗಿ ಪೆÇಲೀಸರು ತಿಳಿಸಿದ್ದಾರೆ.