ಮದ್ಯ ಸಹಿತ ನಾಲ್ವರ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ
ಕಾಸರಗೋಡು : ಕರ್ನಾಟಕದಿಂದ ವಿದೇಶ ಮದ್ಯ ಸಹಿತ ತಲುಪಿದ ನಾಲ್ಕು ಮಂದಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರ ಕೈಯಲ್ಲಿದ್ದ ಹದಿನಾಲ್ಕುವರೆ ಲೀಟರ್ ಮದ್ಯವನ್ನು ವಶಪಡಿಸಲಾಗಿದೆ.
ಕರ್ನಾಟಕ ಗದಗ ನಿವಾಸಿ ಮುತ್ತಪ್ಪ (19), ಅಜನೂರು ಕಡಪ್ಪುರದ ಕೆ ರಮೇಶನ್ (42), ಎಂ ಕೆ ಅನಿಲ್ (38), ಕೊಲ್ಲಂಗಾನದ ಜೋಸೆಫ್ ಡಿ’ಸೋಜಾ (58) ಎಂಬವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಕುಂಬಳೆ ಅಬಕಾರಿ ಇನ್‍ಸ್ಪೆಕ್ಟರ್ ರೋಬಿನ್ ಬಾಬು ನೇತೃತ್ವದ ತಂಡ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ ಪೆÇಸೋಟ್‍ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆಗಮಿಸಿದ ಬಸ್ಸಿನಿಂದ ಇಳಿದು ನಾಲ್ಕು ಮಂದಿ ಓಡಲು ಯತ್ನಿಸಿದರು. ಕೂಡಲೇ ಅಬಕಾರಿ ಅಧಿಕಾರಿಗಳು ಅವರನ್ನು ಬೆನ್ನಟ್ಟಿ ಸೆರೆ ಹಿಡಿವಲ್ಲಿ ಸಫಲರಾದರು.
ಬಂಧಿತರ ಕೈಯ್ಯಲ್ಲಿದ್ದ ಬ್ಯಾಗಿನಿಂದ 180 ಮಿಲ್ಲಿಯ 42 ಪ್ಯಾಕೆಟ್, 1 ಲೀಟರಿನ 5 ಬಾಟ್ಲಿ, 750 ಮಿಲ್ಲಿಯ 9 ಬಾಟ್ಲಿ ಮದ್ಯ ಪತ್ತೆಹಚ್ಚಿ ವಶಪಡಿಸಲಾಗಿದೆ.