ದಲಿತ ಬಾಲಕರಿಗೆ ಗಾಂಜಾ ಸೇವಿಸಲು ಬಲಾತ್ಕರಿಸಿದವರ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಗಾಂಜಾ ಸೇವನೆಗೆ ಒತ್ತಾಯಿಸಿ ದಲಿತ ಬಾಲಕರಿಬ್ಬರಿಗೆ ಗುಂಪು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಬಂಟ್ವಾಳ ಗ್ರಾಮಾಂತರ ಪೆÇಲೀಸರು ಯಶಸ್ವಿಯಾಗಿದ್ದಾರೆ. ತುಂಬೆ ಗ್ರಾಮದ ಕೆಳಗಿನ ತುಂಬೆ ನಿವಾಸಿಗಳಾದ ಶ್ರವಣ್, ಅವಿನಾಶ್, ಮಾರಿಪಳ್ಳ ಕುಮುಡೇಲು ನಿವಾಸಿಗಳಾದ ರೋಷನ್, ಚರಣ್ ಬಂಧಿತ ಆರೋಪಿಗಳು. ಈ ಬಗ್ಗೆ ಬಾಲಕರ ತಾಯಿ ಸುಜಾತ ನೀಡಿದ ದೂರಿನ ಹಿನ್ನಲೆಯಲ್ಲಿ ಬಂಧನ ನಡೆದಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.