ಇಂದು 3 ಕನ್ನಡ ಸಿನಿಮಾಗಳು ತೆರೆಗೆ

ಈ ವಾರ ಮೂರು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿದೆ.

  • ಮಾಸ್ ಲೀಡರ್ : ಶಿವರಾಜಕುಮಾರ್ ಅಭಿನಯದ `ಮಾಸ್ ಲೀಡರ್’ ಚಿತ್ರ ಕೆಲವು ಕಾರಣಗಳಿಂದ ಇಂದು ರಿಲೀಸ್ ಆಗುತ್ತದೋ ಇಲ್ಲವೋ ಎನ್ನುವ ನೆನಗುದಿಗೆ ಬಿದ್ದಿತ್ತು. ಆದರೆ ಎಲ್ಲಾ ಅಡೆತಡೆಗಳನ್ನೂ ನಿವಾರಿಸಿಕೊಂಡು ಸಿನಿಮಾ ಇಂದು ತೆರೆಕಾಣುತ್ತಿದ್ದು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ನರಸಿಂಹ ನಿರ್ದೇಶನ ಈ ಚಿತ್ರವನ್ನು ತರುಣ್ ಶಿವಪ್ಪ ನಿರ್ಮಾಣ ಮಾಡಿದ್ದಾರೆ. ಚಿತ್ರದಲಿಜ್ಮೊದಲ ಬಾರಿಗೆ ಆರ್ಮಿ ಆಫೀಸರ್ ಆಗಿ ಶಿವರಾಜ್ ಕಾಣಿಸಿಕೊಂಡಿದ್ದು, ಪ್ರಣೀತಾ, ವಿಜಯ ರಾಘವೇಂದ್ರ, ಲೂಸ್ ಮಾದ ಯೋಗೀಶ್, ಗುರು ಜಗ್ಗೇಶ್, ಶರ್ಮಿಳಾ ಮಾಂಡ್ರೆ ಮೊದಲಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
  • ಜಾನಿ : ವಿಜಯ ರಾಘವೇಂದ್ರ ನಟನೆಯ `ಜಾನಿ’ ಸಿನಿಮಾವೂ ಇಂದು ಬಿಡುಗಡೆ ಆಗುತ್ತಿದೆ. ಪಿಕೆಎಚ್ ದಾಸ್ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು, ಬಹುಭಾಷ ನಟ ಸುಮನ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾನೆ. ಆಕ್ಷನ್‍ಭರಿತ ಕಾಮಿಡಿ ಡ್ರಾಮಾ ಇದಾಗಿದ್ದು ಇದರಲ್ಲಿ ಮಲಯಾಳಂ ನಟಿ ಜನನಿ ಮತ್ತು ಮಿಲನ ನಾಗರಾಜ್ ಹೀರೋಯಿನ್ಸ್.
  • `ಇ1′ : ವಿಭಿನ್ನ ಶೀರ್ಷಿಕೆಯ `ಇ1′ ಸಿನಿಮಾ ಅದರ ಹೆಸರಿನಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. ಎ.ಆರ್.ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ ಸಂಹಿತಾ ಶಾ ಮತ್ತು ಮೋಹನ್ ಶೆಟ್ಟಿ ಮುಖ್ಯ ಪಾತ್ರಧಾರಿಗಳು.