ಉಡುಪಿ ಜಿಲ್ಲೆಯಲ್ಲಿ 398 ಅಧಿಸೂಚನಾ ವಕ್ಫ್ ಆಸ್ತಿ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಜಿಲ್ಲೆಯಲ್ಲಿ ಒಟ್ಟು 398, ಅಂದರೆ 360.2 ಎಕ್ರೆ ಅಧಿಸೂಚಿತ ವಕ್ಫ್ ಆಸ್ತಿಗಳಿವೆ ಎಂದು ಉಡುಪಿ ಜಿಲ್ಲಾ ವಕ್ಫ್ ಅಧ್ಯಕ್ಷ ನಕ್ವ ಯತ್ಯಾ ಸಾಹೇಬ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತಾಡಿದ ಅವರು, “398 ಆಸ್ತಿಯಲ್ಲಿ 149 ವಕ್ಫ್ ಆಸ್ತಿ ಉಡುಪಿ ಜಿಲ್ಲೆಯಲ್ಲಿ, 30 ಆಸ್ತಿ ಬ್ರಹ್ಮಾವರದಲ್ಲಿ, 39 ಕುಂದಾಪುರದಲ್ಲಿ, 13 ಆಸ್ತಿ ಬೈಂದೂರಿನಲ್ಲಿ ಮತ್ತು 167 ಆಸ್ತಿಗಳು ಕಾರ್ಕಳದಲ್ಲಿವೆ” ಎಂದು ಅವರು ವಿವರಿಸಿದ್ದಾರೆ.

“ಸುಮಾರು 129 ಸಂಸ್ಥೆಗಳು ಮತ್ತು 270 ಆಸ್ತಿಗಳು ಉಡುಪಿ ಜಿಲ್ಲೆಯ ಎರಡನೇ ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟಿದೆ. ಎರಡನೇ ಸಮೀಕ್ಷೆಯ ಬಳಿಕ ಆಕ್ರಮಿತ ಮತ್ತು ಕಾನೂನು ಬಾಹಿರ ಟ್ರಾನ್ಸಫರುಗಳು ಗುರುತಿಸಲ್ಪಟ್ಟಿದ್ದರಿಂದ ಎರಡನೇ ಹಂತದ ಸಮೀಕ್ಷೆಯನ್ನು ಕೈಗೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಸಮೀಕ್ಷೆಯನ್ನು 2015ರ ಎಪ್ರಿಲಿಗೆ ಮುಂಚಿತವಾಗಿ ಮುಗಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಪ್ರಸಕ್ತ ಮೊದಲ ಹಂತದ ಸಮೀಕ್ಷೆ ಮತ್ತು ಸಮೀಕ್ಷೆ ಪೂರ್ವ ಕೆಲಸಗಳು ಎಲ್ಲಾ ತಾಲೂಕುಗಳಲ್ಲಿ ಪೂರ್ಣಗೊಂಡಿದ್ದು, ಸಮೀಕ್ಷಾ ವರದಿಗಳನ್ನು ತಾಲೂಕು ಕಚೇರಿಯಿಂದ ಸಹಾಯಕ ಕಮಿಷನರ್ ಸಹಿಗಾಗಿ ಕಳುಹಿಸಲಾಗಿದೆ. ಸಹಿ ಪಡೆದ ಬಳಿಕ ಅದನ್ನು ಗಜೆಟ್ ನೋಟಿಫಿಕೇಷನ್ನಿಗಾಗಿ ಜಿಲ್ಲಾಧಿಕಾರಿಯ ಮುಖಾಂತರ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಕ್ಫ್ ಬೋರ್ಡಿನ ಸೂಚನೆಯಂತೆ ವಕ್ಫ್ ಆಸ್ತಿಯ ವಿವರಗಳನ್ನು ಪಟ್ಟಿ ಮಾಡಲಾಗಿದ್ದು, ಹೊಸ ಸೇರ್ಪಡೆಗಳನ್ನು ಅಪ್ಡೇಟ್ ಮಾಡಲು ಕಂದಾಯ ಪ್ರಾಧಿಕಾರದ ಮುಂದೆ ಒಪ್ಪಿಸಲಾಗಿದೆ” ಎಂದು ಸಾಹೇಬ್ ವಿವರಿಸಿದ್ದಾರೆ.