4 ಗ್ರಾಮಗಳ 33 ಮಂದಿಗೆ ಎಚ್ಐವಿ ಕರುಣಿಸಿದ `ವೈದ್ಯ’

 ಲಕ್ನೋ : ನಕಲಿ ವೈದ್ಯನೊಬ್ಬ ಎಲ್ಲಾ ರೋಗಿಗಳಿಗೂ ಚುಚ್ಚುಮದ್ದು ನೀಡಲು ಒಂದೇ ಸಿರಿಂಜ್ ಉಪಯೋಗಿಸಿದ ಕಾರಣ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ನಾಲ್ಕು ಗ್ರಾಮಗಳಲ್ಲಿ ಇತ್ತೀಚೆಗೆ ಕನಿಷ್ಠ 33 ಎಚ್‍ಐವಿ ಪ್ರಕರಣಗಳು ವರದಿಯಾಗಿವೆ.

ರಾಜೇಂದ್ರ ಯಾದವ್ ಎಂಬ ಈ ನಕಲಿ ವೈದ್ಯನನ್ನು  ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಈತನ ಪ್ರಮಾದದಿಂದ ಸಮಸ್ಯೆಗೀಡಾಗಿರುವವರಲ್ಲಿ ಹಿರಿಯಲು ಮತ್ತು ಮಕ್ಕಳೂ ಸೇರಿದ್ದಾರೆ.

ಆರೋಗ್ಯ ಇಲಾಖೆಯ ದ್ವಿಸದಸ್ಯ ಸಮಿತಿಯೊಂದು ಜನವರಿ ತಿಂಗಳಲ್ಲಿ ಮೂರು ದಿನಗಳ ಕಾಲ ಈ ನಾಲ್ಕು ಗ್ರಾಮಗಳಲ್ಲಿ 556 ಮಂದಿಯ ತಪಾಸಣೆ ನಡೆಸಿದಾಗ ಅವರಲ್ಲಿ 33 ಮಂದಿಗೆ ಎಚ್‍ಐವಿ ಇರುವುದು ಪತ್ತೆಯಾಗಿತ್ತು.

ಸರಕಾರಿ ಆಸ್ಪತ್ರೆಗಳು ಸರಿಯಾಗಿ ಕಾರ್ಯಾಚರಿಸದ ಕಾರಣ ಬಡವರು  ಕಡಿಮೆ ಶುಲ್ಕ ವಿಧಿಸುವ ನಕಲಿ ವೈದ್ಯರ ಮೊರೆ ಹೋಗುತ್ತಿದ್ದಾರೆ ಎಂದು  ಗ್ರಾಮಸ್ಥರು ಹೇಳುತ್ತಿದ್ದಾರೆ.

LEAVE A REPLY