ಆಮ್ಲಜನಕ ಕೊರತೆಯಿಂದ ಗೋರಖಪುರ ಸರಕಾರಿ ಆಸ್ಪತ್ರೆಯಲ್ಲಿ 30 ಮಕ್ಕಳ ಸಾವು

ಗೋರಖಪುರ್ : ಉತ್ತರ ಪ್ರದೇಶ ಸೀಎಂ ಯೋಗಿ ಆದಿತ್ಯನಾಥ ಅವರ ಕ್ಷೇತ್ರವಾದ ಇಲ್ಲಿನ  ಸರಕಾರಿ ಬಿ ಆರ್ ಡಿ ಆಸ್ಪತ್ರೆಯ ರೋಗಿಗಳಿಗೆ ಅಗತ್ಯವಾದ ಆಮ್ಲಜನಕ ಸಿಲಿಂಡರ್ ಪೂರೈಕೆಯ ಗುತ್ತಿಗೆ ಪಡೆದಿದ್ದ ಖಾಸಗಿ ಸಂಸ್ಥೆಯು ತನಗೆ ಬರಬೇಕಾದ ಬಾಕಿ ರೂ 70 ಲಕ್ಷ ಹಣವನ್ನು ಪಾವತಿಸದೆ  ಆಮ್ಲಜನಕ ಪೂರೈಸುವುದಿಲ್ಲವೆಂದು ಹೇಳಿದ ಪರಿಣಾಮ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರುಗಳ ಕೊರತೆಯಾಗಿ ಕಳೆದ 48 ಗಂಟೆಗಳ ಅವಧಿಯಲ್ಲಿ 30 ಮಕ್ಕಳು ದಾರುಣ ಸಾವಿಗೀಡಾಗಿದ್ದಾರೆ. ಸಾವಿಗೀಡಾದವರಲ್ಲಿ 14 ನವಜಾತ ಶಿಶುಗಳು ಸೇರಿವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ರೌಟೇಲಾ ತಿಳಿಸಿದ್ದಾರೆ.