ಬಾಲಕಿ ಅತ್ಯಾಚಾರಗೈದ ನ್ಯಾಯಾಧೀಶಗೆ ಮೂರು ವರ್ಷ ಕಾರಾಗೃಹ ಶಿಕ್ಷೆ

ಪುಣೆ : 2014 ಜೂನಿನಲ್ಲಿ ಹದಿನೈದು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಗೈದ ಆರೋಪಿ ನ್ಯಾಯಾಧೀಶಗೆ ಪುಣೆ ವಿಶೇಷ ಕೋರ್ಟ್ ಮೂರು ವರ್ಷ ಕಠಿಣ ಸಜೆ ವಿಧಿಸಿ ತೀರ್ಪಿತ್ತಿದೆ.

ಶುಕ್ರವಾರದಂದು ಜಡ್ಜ್ ನಾಗರಾಜ್ ಶಿಂಧೆಯ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ವಿಶೇಷ ಸೆಷನ್ಸ್ ಕೋರ್ಟಿನ ಜಡ್ಜ್ ಮಂಗಳಾ ಧೋತೆ ಈ ತೀರ್ಪು ನೀಡಿದರು. ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಶಿಂಧೆ ಮೊನ್ನೆ ವಿಚಾರಣೆ ವೇಳೆ ಕೋರ್ಟಿಗೆ ಶರಣಾಗಿದ್ದರು. ಆರೋಪಿ ಜಡ್ಜ್ ಮತ್ತು ಅತ್ಯಾಚಾರಕ್ಕೊಳಗಾಗಿರುವ ಬಾಲಕಿ ಒಂದೇ ಹೌಸಿಂಗ್ ಸೊಸೈಟಿಯಲ್ಲಿ ವಾಸಿಸುತ್ತಿದ್ದರು.

2014ರಂದು ಶಿಂದೆ ಪತ್ನಿ ತನ್ನ ಪಾಲಕರ ಮನೆಗೆ ಹೋಗಿದ್ದ ವೇಳೆ ಬಾಲಕಿಗೆ ಚಿನ್ನದ ಆಭರಣ, ಮೊಬೈಲ್ ಫೋನ್ ನೀಡುವ ಮತ್ತು ಯು ಪಿ ಎಸ್ ಸಿ ಹಾಗೂ ಎಂ ಪಿ ಎಸ್ ಸಿ ಪರೀಕ್ಷೆ ಗೈಡಾಗುವುದಾಗಿ ಸುಳ್ಳು ಹೇಳಿದ್ದ ಶಿಂಧೆ, ಆಕೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಮನೆಗೆ ಬಂದಿದ್ದ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ ಶಿಂಧೆ, ಈ ಘಟನೆ ಬಗ್ಗೆ ಯಾರಲ್ಲಾದರೂ ತಿಳಿಸಿದರೆ ಪರಿಸ್ಥಿತಿ ನೆಟ್ಟಗಾಗಲಿಕ್ಕಿಲ್ಲ ಎಂದು ಬೆದರಿಕೆಯೊಡ್ಡಿದ್ದ ಎಂದು ಪೊಲೀಸರು ಹೇಳಿದರು.