15 ದಿನದಲ್ಲಿ ಮೂರ್ನಾಲ್ಕು ಭ್ರಷ್ಟ ಸಚಿವರ ರಾಜೀನಾಮೆ : ಯಡ್ಡಿ

ಶಿವಮೊಗ್ಗ : ಉಕ್ಕಿನ ಸೇತುವೆ, ಎತ್ತಿನಹೊಳೆ ಮತ್ತು ಸುಮಾರು 5,000 ಕೋಟಿ ರೂ ಮೌಲ್ಯದ ಹಣ ವರ್ಗಾವಣೆ ಹಗರಣಗಳಲ್ಲಿ ಶಾಮೀಲಾಗಿರುವ ಮೂರ್ನಾಲ್ಕು ಹಿರಿಯ ಸಚಿವರು ಮುಂದಿನ 15 ದಿನದೊಳಗೆ ಸಂಪುಟಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭವಿಷ್ಯ ನುಡಿದರು.

ತಾನು ಹಿರಿಯ ಸಚಿವರೊಬ್ಬರಿಗೆ ಕೋಟ್ಯಂತರ ರೂ ನೀಡುರುವುದಾಗಿ ಈಗ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ರಾಜ್ಯ ಹೆದ್ದಾರಿಗಳ ಪ್ರಾಜೆಕ್ಟ್ ಮುಖ್ಯಸ್ಥ ಜಯಚಂದ್ರ ಬಹಿರಂಗಪಡಿಸಿದ್ದು, ಆತ ಸೀಎಂ ಸಿದ್ದರಾಮಯ್ಯರ ಆಪ್ತನಾಗಿದ್ದಾನೆ. ಅಲ್ಲದೆ ಪಿಡಬ್ಲ್ಯೂಡಿ ಸಚಿವ ಮಹದೇವಪ್ಪ ನಿರೀಕ್ಷಣಾ ಜಾಮೀನು ಕೋರಿದ್ದಾರೆ ಎಂದರು.“ಸಚಿವರು ಹಣ ಸ್ವೀಕರಿಸಿರುವ ಬಗ್ಗೆ ಸೀಎಂ ಜನತೆಗೆ ಮಾಹಿತಿ ನೀಡಬೇಕಿದ್ದರೂ, ಅವರು ಮಾತ್ರ ಭ್ರಷ್ಟ ಸಚಿವರನ್ನು ರಕ್ಷಿಸುತ್ತಿದ್ದಾರೆ” ಎಂದವರು ಆರೋಪಿಸಿದರು.